Home ಟಾಪ್ ಸುದ್ದಿಗಳು ಮಿಸ್ ಯುನಿವರ್ಸ್ ಗೆದ್ದ ಭಾರತದ ಚೆಲುವೆ ಹರ್ನಾಜ್ ಸಂಧು

ಮಿಸ್ ಯುನಿವರ್ಸ್ ಗೆದ್ದ ಭಾರತದ ಚೆಲುವೆ ಹರ್ನಾಜ್ ಸಂಧು

ಐಲಾಟ್: ಸೌಂದರ್ಯ ಸ್ಪರ್ಧೆ ಮಿಸ್ ಯುನಿವರ್ಸ್ ನಲ್ಲಿ ಭಾರತದ ಚೆಲುವೆ ಹರ್ನಾಜ್ ಸಂಧು ಗೆಲುವು ಸಾಧಿಸಿದ್ದಾರೆ.

ಇಸ್ರೇಲ್‌ ನ ಐಲಾಟ್‌ ನಲ್ಲಿ ನಡೆದ ಸ್ಪರ್ಧೆಯಲ್ಲಿ ಹರ್ನಾಜ್ ಸಂಧು ಅವರು ಪರಾಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸ್ಪರ್ಧಿಗಳನ್ನು ಸೋಲಿಸಿದರು. ಈ ಮೂಲಕ 21 ವರ್ಷಗಳ ಬಳಿಕ ಮಿಸ್ ಯುನಿವರ್ಸ್ ಕಿರೀಟ ಭಾರತದ ಬೆಡಗಿಯ ಪಾಲಾಗಿದೆ.

ಹರ್ನಾಜ್‌ ಗಿಂತ ಮೊದಲು, ಇಬ್ಬರು ಭಾರತೀಯರು ಮಾತ್ರ ಮಿಸ್ ಯುನಿವರ್ಸ್ ಕಿರೀಟವನ್ನು ಗೆದ್ದಿದ್ದಾರೆ. 1994ರಲ್ಲಿ ಸುಶ್ಮಿತಾ ಸೇನ್ ಮತ್ತು 2000ನೇ ಇಸವಿಯಲ್ಲಿ ಲಾರಾ ದತ್ತಾ ಮಿಸ್ ಯುನಿವರ್ಸ್ ಕಿರೀಟ ಗೆದ್ದುಕೊಂಡಿದ್ದರು.

Join Whatsapp
Exit mobile version