ಅನಿವಾಸಿ ಭಾರತೀಯರಿಗೆ ಯುಎಇ ಪ್ರವಾಸಿ ವೀಸಾ

Prasthutha|

ನವದೆಹಲಿ: ಕೊರೊನಾ ಪ್ರಕರಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ಯುಎಇ ಸರ್ಕಾರ ಪ್ರವಾಸಿ ವೀಸಾವನ್ನು ಮಂಜೂರು ಮಾಡುವ ಮೂಲಕ ಅನಿವಾಸಿ ಭಾರತೀಯರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಈ ವೀಸಾ ಸೌಲಭ್ಯ ಪಡೆಯ ಬಯಸುವವರು ನೇರವಾಗಿ ಯುಎಇ ಗೆ ಪ್ರಯಾಣ ಬೆಳೆಸುವಂತಿಲ್ಲ. 14 ದಿನಗಳ ಕಾಲ ತೃತೀಯ ರಾಷ್ಟ್ರದಲ್ಲಿ ಕ್ವಾರಂಟೈನ್ ಕಡ್ಡಾಯವಾಗಲಿದೆ ಯೆಂದು ಯುಎಇ ತನ್ನ ಅಧಿಕೃತ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

- Advertisement -

ನೇಪಾಳ, ನೈಜೀರಿಯಾ, ಪಾಕಿಸ್ತಾನ ಮತ್ತು ಉಗಾಂಡ ರಾಷ್ಟ್ರಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗುತ್ತಿದೆಯೆಂದು ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಯುಎಇ ಪ್ರಜೆಗಳಿಗೆ ಮತ್ತು ಯುಎಇ ಮೂಲಕ ಅನ್ಯ ರಾಷ್ಟ್ರಗಳಿಗೆ ತೆರಳುವವರಿಗೆ ಮಾತ್ರ ಯುಎಇ ಪ್ರವೇಶಕ್ಕೆ ಅನುಮತಿಯಿದೆ. ವ್ಯಾಪಕವಾಗಿ ಹರಡುತ್ತಿದ್ದ ಕೋವಿಡ್ ನಿಯಂತ್ರಿಸುವ ಸಲುವಾಗಿ ಯುಎಇ ಪ್ರವೇಶಕ್ಕೆ ಕಟ್ಟುನಿಟ್ಟಿನ ನಿಯಮಾವಳಿಯನ್ನು ಜಾರಿಗೊಳಿಸಿತ್ತು.

ಪ್ರಸಕ್ತ ಯುಎಇ ಯಲ್ಲಿ ಕೋವಿಡ್ ಪ್ರಕರಣದಲ್ಲಿ ಗಣನೀಯ ಇಳಿಮುಖ ವಾಗಿರುವ ಹಿನ್ನೆಲೆಯಲ್ಲಿ ಈ ನಿಯಮಾವಳಿಯನ್ನು ಸಡಿಲಗೊಳಿಸಲು ಅರಬ್ ಸಂಯುಕ್ತ ನಿರ್ಧರಿಸಿದೆ. ಮಾತ್ರವಲ್ಲದೆ ಪ್ರಯಾಣಿಕರು ಯುಎಇ ತಲುಪಿದ ದಿನ ಮತ್ತು 9 ದಿನಗಳ ಬಳಿಕ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಿ ಯುಎಇ ಸರ್ಕಾರ ಆದೇಶ ಹೊರಡಿಸಿದೆ.

Join Whatsapp