►ವಿಳಂಬ ನೀತಿ ಅನುಸರಿಸುತ್ತಿರುವ WHO
ಹೊಸದಿಲ್ಲಿ: ಭಾರತ್ ಬಯೋಟೆಕ್ ತಯಾರಿಸಿದ ಕೊವಾಕ್ಸಿನ್ ನ ಎರಡು ಡೋಸ್ ಪಡೆದುಕೊಂಡ ಭಾರತೀಯರು ಇನ್ನೂ ವಿದೇಶ ಪ್ರವಾಸಕ್ಕಾಗಿ ಕಾಯಬೇಕಾಗುತ್ತದೆ ಎಂದು ವರದಿಯೊಂದು ತಿಳಿಸಿದೆ.
ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವರಾದ ಭಾರತಿ ಪ್ರವೀಣ್ ಪವಾರ್ ನಿನ್ನೆ ಕೋವಾಕ್ಸಿನ್ ಅನ್ನು ಶೀಘ್ರದಲ್ಲೇ ಅನುಮೋದಿಸಲಾಗುವುದು ಎಂದು ಹೇಳಿದ್ದರು. ಆದರೆ, ವಿಶ್ವ ಆರೋಗ್ಯ ಸಂಸ್ಥೆ (WHO) ಕೊವ್ಯಾಕ್ಸಿನ್ ನ ಅನುಮೋದನೆಯನ್ನು ವಿಳಂಬಗೊಳಿಸುವುದಾಗಿ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಲಸಿಕೆ ತಯಾರಕ ಸಂಸ್ಥೆಯಾದ ಭಾರತ್ ಬಯೋಟೆಕ್‌ನಿಂದ ಹೆಚ್ಚಿನ ಮಾಹಿತಿಯನ್ನು ಕೇಳಿದೆ. ವಿಶ್ವ ಆರೋಗ್ಯ ಸಂಸ್ಥೆ (WHO)ಯ ರೋಗನಿರೋಧಕ ತಜ್ಞರ ಸಮಿತಿಯು ಅಕ್ಟೋಬರ್ 5 ರಂದು ಸಭೆ ಸೇರಲಿದೆ. ಇದರ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು WHO ಹೇಳಿದೆ.
ಫಿಜರ್-ಬೈಯೊಂಟೆಕ್, ಜಾನ್ಸನ್ & ಜಾನ್ಸನ್, ಮೊಡೆನಾ, ಸಿನೋಫಾರ್ಮ್ ಮತ್ತು ಆಕ್ಸ್‌ಫೆಡ್-ಅಸ್ಟ್ರಾಸೆನಿಕಾಗಳಂತಹ ಲಸಿಕೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಯು ತುರ್ತು ಬಳಕೆಗೆ ಅನುಮೋದಿಸಿತ್ತು. ಈ ಹಿಂದೆ ಭಾರತ್ ಬಯೋಟೆಕ್ ವಿಶ್ವ ಆರೋಗ್ಯ ಸಂಸ್ಥೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಒದಗಿಸಿರುವುದಾಗಿ ಹೇಳಿತ್ತು. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆಯು ತಾಂತ್ರಿಕ ಸಮಸ್ಯೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಕೇಳಿದೆ.