ನವದೆಹಲಿ: ಏರುತ್ತಿರುವ ಕಚ್ಚಾ ತೈಲದ ಬೆಲೆಗಳು ಮತ್ತು ವಿದೇಶಿ ಬಂಡವಾಳದ ವಹಿವಾಟುನಿಂದಾಗಿ ಭಾರತೀಯ ರೂಪಾಯಿಯ ಮೌಲ್ಯವು ಪಾತಾಳಕ್ಕಿಳಿದಿದ್ದು, ಯುಎಇಯ ಪ್ರತಿ ದಿರ್ಹಮ್ಸ್’ಗೆ 22.27 ರೂ. ಮತ್ತು ಪ್ರತಿ ಸೌದಿ ರಿಯಾಲ್’ಗೆ 21.77 ರೂ. ಆಗಿದೆ.
ಕಳೆದ ಕೆಲವು ತಿಂಗಳುಗಳಿಂದ ರೂಪಾಯಿ ದರವು ನಿರಂತರವಾಗಿ ಕುಸಿಯುತ್ತಿರುವುದರಿಂದ ಯುಎಇ, ಸೌದಿ ಅರೇಬಿಯಾ ಮತ್ತು ಇತರ ದೇಶಗಳಲ್ಲಿನ ಅನಿವಾಸಿ ಭಾರತೀಯರು ಎರಡು ಆಯ್ಕೆಗಳ ಮಧ್ಯೆ ಗೊಂದಲಕ್ಕೀಡಾಗಿದ್ದಾರೆ. ಇದೀಗ ಹಣವನ್ನು ತಾಯ್ನಾಡಿಗೆ ಕಳುಹಿಸುವುದಾ ಅಥವಾ ಮತ್ತಷ್ಟು ಕುಸಿತಕ್ಕಾಗಿ ಕಾಯುವುದಾ ಎಂಬ ಗೊಂದಲದಲ್ಲಿ ಅನಿವಾಸಿಯರು ದಿನ ದೂಡುತ್ತಿದ್ದಾರೆ. ಹೆಚ್ಚಿನ ಅನಿವಾಸಿಯರು ಮನೆಗೆ ಹಣ ರವಾನಿಸಲು ಪ್ರಾರಂಭಿಸಿದ್ದಾರೆ.
ವಿದೇಶಿ ಹೂಡಿಕೆದಾರರು ಸೆಪ್ಟೆಂಬರ್’ನಲ್ಲಿ ಮಾರಾಟಗಾರರು ಭಾರತೀಯ ಷೇರು ಮಾರುಕಟ್ಟೆಯಿಂದ 7600 ಕೋಟಿ ರೂಪಾಯಿಗಳನ್ನು ಹಿಂಪಡೆದಿದ್ದರಿಂದ ಮುಂಬರುವ ದಿನಗಳಲ್ಲಿ ರೂಪಾಯಿ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ ಎನ್ನಲಾಗಿದೆ.