Home ಟಾಪ್ ಸುದ್ದಿಗಳು ಪೋರ್ಚುಗಲ್ ನಲ್ಲಿ ಭಾರತೀಯ ಗರ್ಭಿಣಿ ಮೃತ್ಯು: ಆರೋಗ್ಯ ಸಚಿವೆ ರಾಜೀನಾಮೆ

ಪೋರ್ಚುಗಲ್ ನಲ್ಲಿ ಭಾರತೀಯ ಗರ್ಭಿಣಿ ಮೃತ್ಯು: ಆರೋಗ್ಯ ಸಚಿವೆ ರಾಜೀನಾಮೆ

ಬಿಲ್ಬನ್: ಭಾರತದ ಗರ್ಭಿಣಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರಿಂದ ನೈತಿಕ ಹೊಣೆ ಹೊತ್ತು ಪೋರ್ಚುಗಲ್ ನ ಆರೋಗ್ಯ ಸಚಿವೆ ಮಾರ್ತಾ ಟೆಮಿಡೋ ಮಂಗಳವಾರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


ಎದೆನೋವು ಕಾಣಿಸಿಕೊಂಡ ಬಳಿಕ ಗರ್ಭಿಣಿ ಪ್ರವಾಸಿಯನ್ನು ಬೆಡ್ ಸಿಗದ ಕಾರಣ ಲಿಸ್ಬನ್ ನಲ್ಲಿ ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಅಷ್ಟರಲ್ಲಿ ಸಾವನ್ನಪ್ಪಿದ್ದರು. ಇದಾದ ಒಂದೇ ಗಂಟೆಯಲ್ಲಿ ಆರೋಗ್ಯ ಮಂತ್ರಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.


ಜರ್ನಲ್ ಡೆ ನೋಟಿಸಿಯಸ್ ವರದಿಯಂತೆ, ತರ್ತು ಆರೋಗ್ಯ ಸೇವಾ ವಿಭಾಗಗಳನ್ನು ಮುಚ್ಚಿದ್ದು ಸಾವಿಗೆ ಕಾರಣ ಎಂದು ಟೆಮಿಡೋ ವಿರುದ್ಧ ಟೀಕಾ ಪ್ರಹಾರ ಮಾಡಲಾಗಿತ್ತು. ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಗರ್ಭಿಣಿಯರಿಗೆ ಸಕಾಲದಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆಯಡಿ ಚಿಕಿತ್ಸೆ ದೊರೆಯದಿದ್ದುದು ಸಹ ಟೀಕೆಗೆ ಗುರಿಯಾಗಿತ್ತು.


ಪೋರ್ಚುಗಲ್ ಪ್ರಧಾನಿ ಅಂಟೋನಿಯೋ ಕೋಸ್ಟಾ ಅವರು ಟೆಮಿಡೋ ಅವರು ಕೊರೋನಾ ಸಂಕ್ರಾಮಿಕ ಸಹಿತ ಎಲ್ಲವನ್ನೂ ಜಾಣ್ಮೆಯಿಂದ ನಿರ್ವಹಿಸಿದವರು; ಅವರ ಸೇವೆ ಅಪಾರ ಎಂದು ಟ್ವೀಟ್ ಮಾಡಿದ್ದಾರೆ. ಆರೋಗ್ಯ ಸೇವಾ ಪದ್ಧತಿಯನ್ನು ಸುಧಾರಿಸಲು ಇನ್ನಷ್ಟು ಪ್ರಯತ್ನಿಸುವುದಾಗಿಯೂ ಕೋಸ್ಟಾ ತಿಳಿಸಿದ್ದಾರೆ.


ಸ್ಥಳೀಯ ಸುದ್ದಿ ಮಾಧ್ಯಮಗಳ ವರದಿಯ ಪ್ರಕಾರ, ಭಾರತದ 34 ವರ್ಷ ಪ್ರಾಯದ ಪ್ರವಾಸಿಯು 31 ವಾರಗಳ ಗರ್ಭಿಣಿಯಾಗಿದ್ದರು. ಮಹಿಳೆಗೆ ಉಸಿರಾಟದಲ್ಲಿ ಏರುಪೇರು ಉಂಟಾದಾಗ ದೇಶದ ಅತಿ ಹೆಚ್ಚಿನ ಆರೋಗ್ಯ ಸೇವಾ ಆಸ್ಪತ್ರೆ ಎನ್ನಲಾದ ಸಂತ ಮರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.


ಅವರ ಉಸಿರಾಟದ ಸಮಸ್ಯೆಯನ್ನು ಸಮಸ್ಥಿತಿಗೆ ತಂದ ಬಳಿಕ ಆಸ್ಪತ್ರೆಯವರು ಆಕೆಯನ್ನು ಸಾವೋ ಫ್ರಾನ್ಸಿಸ್ಕೋ ಆಸ್ಪತ್ರೆಗೆ ಹಸ್ತಾಂತರಿಸಿದರು. ಯಾಕೆಂದರೆ ಈ ಆಸ್ಪತ್ರೆಯಲ್ಲಿ ನವ ಜೀವಾಗಮನ ವಾರ್ಡ್ ಎಲ್ಲ ಭರ್ತಿಯಾಗಿತ್ತು. ದಾರಿಯಲ್ಲಿ ಮಹಿಳೆ ಹೃದಯಾಘಾತದ ಒತ್ತಡಕ್ಕೆ ಸಿಲುಕಿದರು.


ಎರಡನೆಯ ಆಸ್ಪತ್ರೆಯಲ್ಲಿ ಆಕೆಗೆ ಸಿ- ವಿಭಾಗದಲ್ಲಿ ಅಗತ್ಯ ಚಿಕಿತ್ಸೆ ನಡೆದು ದಿನ ತುಂಬದೆ ಹುಟ್ಟಿದ ಮಗುವನ್ನು ವಿಶೇಷ ನಿಗಾ ವಿಭಾಗಕ್ಕೆ ಸೇರಿಸಲಾಯಿತು. ಅಲ್ಲಿ ಮಹಿಳೆ ಸಾವಿಗೀಡಾಗಿದ್ದಾರೆ. ಮಹಿಳೆಯ ಸಾವಿಗೆ ಏನು ಕಾರಣ ಎಂದು ತನಿಖೆ ಆರಂಭವಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

Join Whatsapp
Exit mobile version