Home ಟಾಪ್ ಸುದ್ದಿಗಳು ಭಾರತದ ರಾಜಕೀಯಕ್ಕೆ ನ್ಯೂಝಿಲೆಂಡ್ ಪ್ರಧಾನಿಯಂಥವರ ಅಗತ್ಯವಿದೆ: ಜೈರಾಮ್ ರಮೇಶ್

ಭಾರತದ ರಾಜಕೀಯಕ್ಕೆ ನ್ಯೂಝಿಲೆಂಡ್ ಪ್ರಧಾನಿಯಂಥವರ ಅಗತ್ಯವಿದೆ: ಜೈರಾಮ್ ರಮೇಶ್

ಹೊಸದಿಲ್ಲಿ: ಭಾರತದ ರಾಜಕಾರಣಕ್ಕೆ ನ್ಯೂಝಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರಂಥ ನಾಯಕರ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.


ತಮ್ಮ ದೇಶದ ನಾಯಕಿ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿರುವ ನ್ಯೂಝಿಲೆಂಡ್ ಪ್ರಧಾನಿ ಜಸಿಂಡಾ ಆರ್ಡರ್ನ್ ಅವರ ನಡೆಯನ್ನು ಜೈರಾಮ್ ರಮೇಶ್ ಶ್ಲಾಘಿಸಿದ್ದಾರೆ.


ಫೆಬ್ರವರಿ 7 ತನ್ನ ಕಚೇರಿಯಲ್ಲಿ ಕೊನೆಯ ದಿನವಾಗಿರುತ್ತದೆ ಎಂದು ಆರ್ಡರ್ನ್ ನೇಪಿಯರ್’ನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಅಕ್ಟೋಬರ್ 14 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯವರೆಗೆ ಅವರು ಶಾಸಕರಾಗಿ ಮುಂದುವರಿಯಲಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿದ ಅವರು, ಖ್ಯಾತ ಕ್ರಿಕೆಟ್ ವಿಶ್ಲೇಷಕ ವಿಜಯ್ ಮರ್ಚೆಂಟ್ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿ ನಿವೃತ್ತಿ ಬಗ್ಗೆ ಒಮ್ಮೆ ಹೇಳಿದ್ದರು. ಆದರೆ, ಅಭಿಮಾನಿಗಳು ವಿಜಯ್ ಅವರನ್ನು ಯಾವಾಗ ನಿವೃತ್ತಿ ಹೊಂದುತ್ತೀರಿ ಎಂದು ಕೇಳಲಿಲ್ಲ. ಬದಲಿಗೆ ಏಕೆ ನಿವೃತ್ತರಾಗುತ್ತಿದ್ದೀರಿ ಎಂದು ಕೇಳಿದ್ದರು. ಇದೀಗ ಕಿವೀಸ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರು ಮರ್ಚೆಂಟ್’ರ ನಿಯಮವನ್ನು ಅನುಸರಿಸುತ್ತಿರುವುದಾಗಿ ಹೇಳಿದ್ದಾರೆ. ಭಾರತದ ರಾಜಕೀಯಕ್ಕೆ ಜಸಿಂಡಾ ಅವರಂತಹವರು ಬೇಕಾಗಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

Join Whatsapp
Exit mobile version