ಇಸ್ಲಾಮಾಬಾದ್: ಪ್ರಸಕ್ತ ವರ್ಷದ ಪಾಸ್ಪೋರ್ಟ್ ರ್ಯಾಂಕಿಂಗ್ ಪ್ರಕಟವಾಗಿದ್ದು, ಭಾರತ 85ನೇ ಸ್ಥಾನವನ್ನು ಪಡೆದಿದೆ.
ಪಾಸ್ಪೋರ್ಟ್ ರ್ಯಾಂಕಿಂಗ್ ನಲ್ಲಿ ಭಾರತವು 2019, 2020, 2021 ಮತ್ತು 2022ನೇ ಸಾಲಿನಲ್ಲಿ ಕ್ರಮವಾಗಿ 82, 84, 85 ಮತ್ತು 83 ನೇ ಸ್ಥಾನ ಪಡೆದಿತ್ತು.
ವಿಶ್ವದ ಬೇರೆ-ಬೇರೆ ತಾಣಗಳಿಗೆ ವೀಸಾ ಮುಕ್ತ ಪ್ರವೇಶಕ್ಕೆ ಅನುಮತಿಸುವ ಪಾಸ್ಪೋರ್ಟ್ಗಳನ್ನು ಪರಿಶೀಲಿಸಿ ಹೆನ್ಲಿ ಪಾಸ್ಪೋರ್ಟ್ ತನ್ನ ಸೂಚ್ಯಂಕವನ್ನು ಬಿಡುಗಡೆಗೊಳಿಸಿದೆ. ಈ ಪೈಕಿ 193 ಜಾಗತಿಕ ತಾಣಗಳಿಗೆ ವೀಸಾ ಮುಕ್ತ ಪ್ರಯಾಣ ಅವಕಾಶ ಹೊಂದುವ ಮೂಲಕ ಜಪಾನ್ ಪಾಸ್ಪೋರ್ಟ್ ಸತತ 5ನೇ ವರ್ಷವೂ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ.
ಅಗ್ರ 5ರ ಪಟ್ಟಿಯಲ್ಲಿ ಸಿಂಗಾಪುರ, ದಕ್ಷಿಣ ಕೊರಿಯಾ, ಜರ್ಮನಿ ಹಾಗೂ ಸ್ಪೇನ್ ಸೇರಿವೆ. ಅಮೆರಿಕ ಮೊದಲ 22 ರಾಷ್ಟ್ರಗಳ ಸಾಲಿನಲ್ಲಿ ಇದೆ.