Home ಟಾಪ್ ಸುದ್ದಿಗಳು ಕೊರೊನ ಲಸಿಕೆ ಪಡೆಯಲಿರುವ ವಿಶ್ವದ ಮೊದಲಿಗ ಭಾರತೀಯ ಮೂಲದ ವ್ಯಕ್ತಿ!

ಕೊರೊನ ಲಸಿಕೆ ಪಡೆಯಲಿರುವ ವಿಶ್ವದ ಮೊದಲಿಗ ಭಾರತೀಯ ಮೂಲದ ವ್ಯಕ್ತಿ!

ಲಂಡನ್ : ಕೋವಿಡ್ 19 ಗೆ ಜಗತ್ತಿನಲ್ಲೇ ಮೊದಲ ಅಧಿಕೃತ ಲಸಿಕೆ ಇಂಗ್ಲೆಂಡ್ ಘೋಷಿಸಿದ್ದು, ಇಂದಿನಿಂದ ಜನ ಸಾಮಾನ್ಯರಿಗೆ ಲಭ್ಯವಾಗಲಿದೆ. ಈ ನಡುವೆ, ಈ ಕೋವಿಡ್ ಲಸಿಕೆಯನ್ನು ಅಲ್ಲಿ ಮೊದಲು ಪಡೆಯುತ್ತಿರುವುದು ಭಾರತೀಯ ಎಂಬುದು ವಿಶೇಷ. ಬ್ರಿಟನ್ ನಲ್ಲಿ ಕೊರೊನ ವಿರುದ್ಧ ಸಿದ್ಧಪಡಿಸಲಾಗಿರುವ ಫೈಜರ್ ಲಸಿಕೆಯನ್ನು ಭಾರತೀಯ ಮೂಲದ ಹರಿ ಶುಕ್ಲಾ ಎಂಬವರಿಗೆ ನೀಡಲಾಗುತ್ತದೆ ಎನ್ನಲಾಗಿದೆ.

ಆ ಮೂಲಕ ಹರಿ ಶುಕ್ಲಾ ಕೊರೊನ ವಿರುದ್ಧದ ಲಸಿಕೆ ಮೊದಲು ಪಡೆದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಶುಕ್ಲಾ ಪಾತ್ರರಾಗಲಿದ್ದಾರೆ. 87 ವರ್ಷದ ಡಾ. ಹರಿಶುಕ್ಲಾ ಮತ್ತು ಅವರ ಪತ್ನಿ 84 ವರ್ಷದ ರಂಜನ್ ಅವರಿಗೆ ಲಸಿಕೆ ಮೊದಲು ಕೊಡಲಾಗುತ್ತದೆ.
ಲಸಿಕೆಯನ್ನು ಪಡೆದುಕೊಳ್ಳುತ್ತಿದ್ದೇನೆ ಎಂದು ಹೇಳಿಕೊಳ್ಳಲಿಕ್ಕೇನೇ ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ. ಲಸಿಕೆ ಸ್ವೀಕರಿಸಲು ನಾನು ಉತ್ಸುಕನಾಗಿದ್ದೇನೆ. ಈ ವರ್ಷ ಎಲ್ಲರ ಪಾಲಿಗೆ ತುಂಬಾನೇ ಕಠಿಣವಾಗಿತ್ತು. ಆದರೆ, ನಾನು ವೈದ್ಯಲೋಕ ಮತ್ತು ವಿಜ್ಞಾನಿಗಳ ಮೇಲೆ ನಂಬಿಕೆಯಿಟ್ಟಿದ್ದೆ ಎಂದು ಹರಿ ಶುಕ್ಲಾ ಹೇಳಿದ್ದಾರೆ.  

Join Whatsapp
Exit mobile version