ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿತ ಪದಕ ವಿಜೇತ ಭಾರತೀಯ ಪುರುಷರ ಹಾಕಿ ತಂಡವು ಸ್ವದೇಶಕ್ಕೆ ಆಗಮಿಸಿದೆ. ಹರ್ಮಪ್ರೀತ್ ಸಿಂಗ್ ನೇತೃತ್ವದ ತಂಡ ಶನಿವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಅದ್ದೂರಿ ಸ್ವಾಗತ ನೀಡಲಾಯಿತು.
ಪ್ರತಿಯೊಬ್ಬ ಆಟಗಾರರಿಗೂ ಶಾಲು, ಹೂವಿನ ಹಾರ ಹಾಕುವ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಇದೇ ವೇಳೆ ವಿಮಾನ ನಿಲ್ದಾಣದ ಬಳಿ ನೆರೆದಿದ್ದ ಪ್ರೇಕ್ಷಕರು ಕೂಡ ಭಾರತೀಯ ಆಟಗಾರರನ್ನು ಹುರಿದುಂಬಿಸಿದರು. ಇದೀಗ ಸಂಭ್ರಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದ ಭಾರತೀಯ ಹಾಕಿ ತಂಡ ಸ್ಪೇನ್ ತಂಡವನ್ನು 2-1 ಅಂತರದಿಂದ ಮಣಿಸಿ ಕಂಚಿನ ಪದಕ ಗೆದ್ದುಕೊಂಡಿದೆ. ವಿಶೇಷ ಎಂದರೆ ಇದು ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡದ 13ನೇ ಪದಕವಾಗಿದೆ. ಹಾಗೆಯೇ 1972ರ ನಂತರ ಇದೇ ಮೊದಲ ಬಾರಿಗೆ ಭಾರತ ಹಾಕಿ ತಂಡವು ಒಲಿಂಪಿಕ್ಸ್ನಲ್ಲಿ ಸತತ ಎರಡನೇ ಪದಕ ಗೆದ್ದುಕೊಂಡಿದೆ.
#WATCH | Indian Men's Hockey Team players receive a grand welcome as they arrive at Delhi airport after winning a bronze medal at the #ParisOlympics2024 pic.twitter.com/NxGLRDtXRi
— ANI (@ANI) August 10, 2024
#WATCH | Captain of the Indian Hockey team, Harmanpreet Singh says, "Medal is a medal and to win it for the country is a big thing. We tried to get to the final and win Gold, but unfortunately, our dream wasn't fulfilled. But, we aren't returned empty-handed, winning medals… https://t.co/DRVSYhYLww pic.twitter.com/J6ctNLwLVv
— ANI (@ANI) August 10, 2024