Home ಟಾಪ್ ಸುದ್ದಿಗಳು ಭಾರತೀಯ ಹೆದ್ದಾರಿಗಳು ಇನ್ನು ಗಂಟೆಗೆ 140 ಕಿಲೋಮೀಟರ್ ವೇಗದಲ್ಲಿ ಸಂಚರಿಸಲು ಮುಕ್ತ: ನಿತಿನ್ ಗಡ್ಕರಿ

ಭಾರತೀಯ ಹೆದ್ದಾರಿಗಳು ಇನ್ನು ಗಂಟೆಗೆ 140 ಕಿಲೋಮೀಟರ್ ವೇಗದಲ್ಲಿ ಸಂಚರಿಸಲು ಮುಕ್ತ: ನಿತಿನ್ ಗಡ್ಕರಿ

ನವದೆಹಲಿ: ಭಾರತ, ಪ್ರಜಾಪ್ರಭುತ್ವ ದೇಶವಾದ್ದರಿಂದ ನಾವು ನಮಗೆ ಮತ ಹಾಕಿದವರಿಗೆ ಮಾತ್ರವಲ್ಲ ನಮಗೆ ಮತ ಹಾಕದವರಿಗೂ ಕೆಲಸ ಮಾಡಬೇಕು. ಭಾರತೀಯ ಹೆದ್ದಾರಿಗಳು ಇನ್ನು ಗಂಟೆಗೆ 140 ಕಿಲೋಮೀಟರ್ ವೇಗದ ವಾಹನಗಳಿಗೂ ಮುಕ್ತ ಎಂದೂ ರಸ್ತೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ನಮ್ಮ ಸಚಿವಾಲಯವು ದೇಶದ ರಸ್ತೆಗಳು ಅದರಲ್ಲೂ ಹೆದ್ದಾರಿಗಳು ಸರ್ವ ಋತುಗಳಲ್ಲಿ ಎಲ್ಲ ಬಗೆಯ ವಾಹನಗಳಿಗೆ ಸೂಕ್ತವಾಗುವಂತೆ ನಿರ್ಮಿಸಲಾಗುತ್ತಿದೆ. ಈ ಸಂರಚನಾ ಪ್ರಕ್ರಿಯೆಯಲ್ಲಿ ಎಲ್ಲ ಬಗೆಯ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಭಾರತದ ಆಟೋಮೊಬೈಲ್ ಕೈಗಾರಿಕೆಗಳಲ್ಲಿ ಹೇಗೆ ಕ್ರಾಂತಿಕಾರಿ ಬದಲಾವಣೆಗಳು ಆಗುತ್ತಿವೆಯೋ ಅದೇ ರೀತಿ ವಿಶ್ವ ಗುಣಮಟ್ಟದ ರಸ್ತೆಗಳಾಗಿ ನಮ್ಮದನ್ನು ಮಾಡಲಾಗುತ್ತಿದೆ ಎಂದು ನಿತಿನ್ ಗಡ್ಕರಿ ತಿಳಿಸಿದರು.

ದೆಹಲಿಯಲ್ಲಿ ಮಾತನಾಡಿದ ಅವರು ರಸ್ತೆಗಳಿಗೆ ಹೊಸ ಶಿಸ್ತಿನ ನಿಯಮಾವಳಿಗಳು ಬರಲಿದ್ದು, ಅವನ್ನೆಲ್ಲ ಬೇಗನೆ ಅಳವಡಿಸಿಕೊಳ್ಳುವಂತೆ ಜಾರಿಗೆ ತರಲು ತಯಾರಿ ನಡೆದಿದೆ ಎಂದು ಸಹ ಅವರು ಹೇಳಿದರು.

“ಜಾಗತಿಕವಾಗಿ ಟ್ರಕ್ಕು ಗಳು ಮತ್ತು ಬಸ್ಸುಗಳು ಒಂದೇ ಪಥದಲ್ಲಿ ಚಲಿಸುತ್ತವೆ. ಆದರೆ ಭಾರತದಲ್ಲಿ ಅದಕ್ಕೆ ಅವಕಾಶ ಇಲ್ಲ. ಆದ್ದರಿಂದ ಹೆದ್ದಾರಿಗಳಲ್ಲಿ ವಾಣಿಜ್ಯ ಉದ್ದೇಶದ ಈ ವಾಹನಗಳು ಕೊನೆಯ ಲೇನ್’ನಲ್ಲಿ ಓಡಾಡುವಂತೆ ಕಡ್ಡಾಯ ಮಾಡಲು ಕ್ರಮ ತೆಗೆದುಕೊಳ್ಳಿ ಎಂದು ನನ್ನ ತಂಡದವರಿಗೆ ಹೇಳಿದ್ದೇನೆ ಎಂದು ಗಡ್ಕರಿ ಹೇಳಿದರು.

ಹೆದ್ದಾರಿಗಳ ಸಂರಚನೆ ಸುಧಾರಿಸಿದಂತೆ ಅಲ್ಲಿ ಓಡಾಡುವ ವಾಹನಗಳ ವೇಗಕ್ಕೆ ಇದ್ದ ಅಡೆತಡೆಗಳು ಕಡಿಮೆಯಾಗುತ್ತ ಬರುತ್ತವೆ.

ಮಹತ್ವಾಕಾಂಕ್ಷೆಯ ದೆಹಲಿಯ ಜೈಪುರ ಹೈವೆಯಲ್ಲಿ ಎರಡು ಗಂಟೆಯಲ್ಲಿ ಗಮ್ಯ ಸೇರಲು ನಿಯಮವಿದ್ದರೂ ಅದು ಸಾಧ್ಯವೇ ಎಂಬ ಪ್ರಶ್ನೆಗೆ ಅವರು ಸರಕಾರ ಆ ರೀತಿ ಮಾಡಿದೆ; ಇನ್ನು ಬಳಕೆದಾರರ ಶಿಸ್ತು ಅದನ್ನು ಆಗಗೊಡಬೇಕು ಎಂದರು.

“ಎಕ್ಸ್ ಪ್ರೆಸ್ ಹೈವೆಯ ಎಲ್ಲೆಲ್ಲ ವಾಹನಗಳ ವೇಗವನ್ನು ಗಂಟೆಗೆ 140 ಕಿಲೋಮೀಟರ್ ವರೆಗೆ ಇಡಬಹುದು ಎನ್ನುವ ಬಗ್ಗೆ ನಾನು ಸಂಬಂಧಿಸಿದ ರಾಜ್ಯ ಸರಕಾರ ಹಾಗೂ ಅಲ್ಲಿನ ರಸ್ತೆ ಸಾರಿಗೆ ಸಚಿವರ ಜೊತೆಗೆ ಸಮಾಲೋಚನೆ ನಡೆಸುತ್ತಿದ್ದೇನೆ. ಒಂದೇ ಮುಖವಾಗಿ ವಾಹನಗಳು ಚಲಿಸುವುದರಿಂದ ಅಡೆತಡೆ ಸಮಸ್ಯೆ ಇರುವುದಿಲ್ಲ. ಸದ್ಯ ಎಕ್ಸ್ ಪ್ರೆಸ್ ಹೈವೆಯ ಸಾಕಷ್ಟು ಕಡೆ ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಹೋಗಲು ಮುಕ್ತ ಅವಕಾಶವಿದೆ. ನಗರ ಪ್ರದೇಶವಾದರೆ ಅದು ಗಂಟೆಗೆ 60-80 ಕಿಮೀಗಳಿಗೆ ಸೀಮಿತ. ನಾವು ಉತ್ತಮ ರಸ್ತೆಗಳನ್ನು ರಚಿಸಿರುವಾಗ ಅವುಗಳಲ್ಲಿ ಹಳೆಯ ವೇಗದಲ್ಲಿ ವಾಹನಗಳು ಹೇಗೆ ಓಡಾಡುವುದು ಸಾಧ್ಯ?” ಗಡ್ಕರಿ ಪ್ರಶ್ನಿಸಿದರು.

2023ರಲ್ಲಿ ಹೊಸ ವೇಗ ಮಿತಿ, ಲೇನ್ ಶಿಸ್ತು ಮತ್ತು ಹೊಸ ರಸ್ತೆ ನಿಯಮಾವಳಿ ಜಾರಿಗೆ ಬರುತ್ತದೆ ಎಂದೂ ಅವರು ಹೇಳಿದರು.

Join Whatsapp
Exit mobile version