Home ಟಾಪ್ ಸುದ್ದಿಗಳು ಮಾಸ್ಕೋ: ರಿಯಾಯಿತಿ ದರದಲ್ಲಿ ರಷ್ಯಾದಿಂದ ತೈಲ ಖರೀದಿಗೆ ಮುಂದಾದ ಮೋದಿ ಸರ್ಕಾರ

ಮಾಸ್ಕೋ: ರಿಯಾಯಿತಿ ದರದಲ್ಲಿ ರಷ್ಯಾದಿಂದ ತೈಲ ಖರೀದಿಗೆ ಮುಂದಾದ ಮೋದಿ ಸರ್ಕಾರ

ಮಾಸ್ಕೋ: ತೈಲ, ಇತರೆ ಸರಕುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ರಷ್ಯಾವು ಭಾರತಕ್ಕೆ ಅವಕಾಶ ನೀಡಿದ್ದು, ಈ ಪ್ರಸ್ತಾಪವನ್ನು ಮೋದಿ ನೇತೃತ್ವದ ಕೇಂದ್ರ ಪರಿಗಣಿಸುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿವೆ.

ರಷ್ಯಾವು ತೈಲ ಮತ್ತು ಇತರೆ ಸರಕುಗಳನ್ನು ಭಾರೀ ರಿಯಾಯಿತಿಯಲ್ಲಿ ನೀಡುತ್ತಿದೆ. ಅದನ್ನು ತೆಗೆದುಕೊಳ್ಳಲು ನಾವು ಸಂತೋಷಪಡುತ್ತೇನೆ. ಈ ನಿಟ್ಟಿನಲ್ಲಿ ಟ್ಯಾಂಕರ್, ವಿಮಾ ರಕ್ಷಣೆ ಮತ್ತು ತೈಲ ಮಿಶ್ರಣದಂತಹಾ ಕೆಲವು ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ. ಈ ಮೇಲಿನ ಸರಕುಗಳನ್ನು ಪಡೆದ ನಂತರ ರಷ್ಯಾದಿಂದ ರಿಯಾಯಿತಿ ಆಫರ್ ಗಳನ್ನು ಪಡೆದುಕೊಳ್ಳುತ್ತೇವೆ ಎಂದು ಭಾರತೀಯ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಐತಿಹಾಸಿವಾಗಿ ಭಾರತವು ತನಗೆ ಬೇಕಾದ ಶೇಕಡಾ 80 ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತದೆ ಮತ್ತು ರಷ್ಯಾವು ಭಾರತ ಬಳಸುವ ಶೇಕಡಾ 2 ರಿಂದ 3 ರಷ್ಟು ಪ್ರಮಾಣಕ್ಕೆ ರಿಯಾಯಿತಿ ನೀಡಲಿದೆ. ಆದಾಗ್ಯೂ ತೈಲ ಬೆಲೆಯಲ್ಲಿ 40 ಶೇಕಡಾ ಏರಿಕೆಯಾಗುವ ಸಾಧ್ಯತೆಯ ಮಧ್ಯೆ ಸರ್ಕಾರ ರಷ್ಯಾದ ಹೆಚ್ಚಿನ ತೈಲವನ್ನು ಸಂಹ್ರಹಿಸಲು ಯೋಜನ ಹಾಕಿದೆ.

ಕೇಂದ್ರ ಈ ನಡೆ ದೇಶಾದ್ಯಂತ ಹೆಚ್ಚುತ್ತಿರುವ ಇಂಧನ ಬಿಲ್ ಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ ಎಂದು ಹೇಳಲಾಗಿದೆ.

ಭಾರತವು ರಷ್ಯಾದೊಂದಿಗೆ ದೀರ್ಘಾವಧಿಯ ರಕ್ಷಣಾ ಸಂಬಂಧವನ್ನು ಹೊಂದಿದೆ ಮತ್ತು ಉಕ್ರೇನ್ ವಿರುದ್ಧ ದಾಳಿ ನಡೆಸುತ್ತಿರುವ ರಷ್ಯಾದ ನಡೆಯನ್ನು ಖಂಡಿಸುವ ವಿಶ್ವಸಂಸ್ಥೆಯ ಮತದಾನದಿಂದ ದೂರ ಉಳಿದಿತ್ತು. ಆದಾಗ್ಯೂ ಹಿಂಸಾಚಾರವನ್ನು ಕೊನಿಗೊಳಿಸಬೇಕೆಂದು ಕೇಂದ್ರ ಸರ್ಕಾರ ವಿವಿಧ ಸಂದರ್ಭದಲ್ಲಿ ಹೇಳಿಕೆ ನೀಡಿತ್ತು.

Join Whatsapp
Exit mobile version