Home ಟಾಪ್ ಸುದ್ದಿಗಳು ಕ್ಯಾಲಿಫೋರ್ನಿಯಾದಲ್ಲಿ ಮಗುವಿನ ಸಮೇತ ಭಾರತೀಯ ಕುಟುಂಬದ ಅಪಹರಣ

ಕ್ಯಾಲಿಫೋರ್ನಿಯಾದಲ್ಲಿ ಮಗುವಿನ ಸಮೇತ ಭಾರತೀಯ ಕುಟುಂಬದ ಅಪಹರಣ

ಕ್ಯಾಲಿಫೋರ್ನಿಯಾ: ಅಮೆರಿಕ ಸಂಯುಕ್ತ ಸಂಸ್ಥಾನದ ಕ್ಯಾಲಿಫೋರ್ನಿಯಾದ ಭಾರತೀಯ ಕುಟುಂಬದ ನಾಲ್ವರನ್ನು ಅಪಹರಿಸಿರುವ ಬಗ್ಗೆ ವರದಿಯಾಗಿದೆ.

ಕ್ಯಾಲಿಫೋರ್ನಿಯಾದ ಬಳಿ 36ರ ಹರೆಯದ ಜಸ್ದೀಪ್ ಸಿಂಗ್, ಪತ್ನಿ 27ರ ಹರೆಯದ ಜಸ್ಲೀನ್ ಸಿಂಗ್, ಅವರ 8 ತಿಂಗಳ ಹೆಣ್ಣು ಮಗು ಆರೂಹಿ ದೇರಿ ಹಾಗೂ ಕುಟುಂಬದ 39ರ ಅಮನ್ದೀಪ್ ಸಿಂಗ್ ಎಂದು ನಾಲ್ವರನ್ನು ಅಪಹರಿಸಿದ್ದಾರೆ ಎಂದು ಮೆರ್ಸೆಡ್ ಕೌಂಟಿ ಶರೀಪರ ಕಚೇರಿಯು ಸೋಮವಾರ ತಿಳಿಸಿದೆ.

ಅಪಹರಣಕಾರರು ಆಯುಧಗಳನ್ನು ಹೊಂದಿದ್ದು ಅಪಾಯಕಾರಿ ಜನರು ಎಂದು ಪೊಲೀಸರು ಹೇಳಿದ್ದಾರೆ.

ದಕ್ಷಿಣ ಹೆದ್ದಾರಿ 59ರ 800ನೇ ಬ್ಲಾಕ್ ನಲ್ಲಿ ಅವರ ವ್ಯಾಪಾರ ನೆಲೆಯಿಂದ ಶಸ್ತ್ರಾಸ್ತ್ರಗಳಿಂದ ಬೆದರಿಸಿ ನಾಲ್ವರನ್ನು ಅಪಹರಿಸಲಾಗಿದೆ. ತನಿಖೆ ಇನ್ನೂ ಆರಂಭ ಹಂತದಲ್ಲಿದೆ ಎಂದು ತಿಳಿದು ಬಂದಿದೆ.

ಹೆದ್ದಾರಿ ಬದಿಯಲ್ಲಿ ಸಾಕಷ್ಟು ರೆಸ್ಟೋರೆಂಟ್ ಗಳು ಮತ್ತು ಚಿಲ್ಲರೆ ಅಂಗಡಿಗಳಿರುವ ಸ್ಥಳದಲ್ಲಿ ಈ ಅಪಹರಣ ನಡೆದಿದೆ. ಯಾವುದೇ ಸುಳಿವು ಇಲ್ಲವೇ ಸಂಶಯಿತರ ಬಗ್ಗೆ ಮಾಹಿತಿ ಇಲ್ಲ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಸಾರ್ವಜನಿಕರು ಅಪಹರಣಕ್ಕೀಡಾದವರನ್ನು ಇಲ್ಲವೇ ಸಂಶಯಿತ ಅಪಹರಣಕಾರರನ್ನು ಸಮೀಪಿಸದಂತೆ ಶರೀಫ್ ಕಚೇರಿಯವರು ಎಚ್ಚರಿಕೆ ನೀಡಿದ್ದಾರೆ.

2019ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ತುಷಾರ್ ಆತ್ರೆ ಎಂಬ ಟೆಕ್ಕಿಯನ್ನು ಅಪಹರಿಸಲಾಗಿತ್ತು; ಮರುದಿನ ಆತನ ಮತ್ತು ಆತನ ಪ್ರೇಯಸಿಯ ಶವಗಳು ಕಾರಿನಲ್ಲಿ ಪತ್ತೆಯಾಗಿದ್ದವು.

Join Whatsapp
Exit mobile version