Home ಟಾಪ್ ಸುದ್ದಿಗಳು ಏಷ್ಯಾದ ಮೊದಲ ಹೈಬ್ರಿಡ್ ಪ್ಲೈಯಿಂಗ್ ಕಾರು ಆವಿಷ್ಕರಿಸಿದ ಭಾರತೀಯ ಮುಸ್ಲಿಮ್ ಇಂಜಿನಿಯರ್: ಪ್ರಾಧಿಕಾರದಿಂದ ಕಡೆಗಣನೆ

ಏಷ್ಯಾದ ಮೊದಲ ಹೈಬ್ರಿಡ್ ಪ್ಲೈಯಿಂಗ್ ಕಾರು ಆವಿಷ್ಕರಿಸಿದ ಭಾರತೀಯ ಮುಸ್ಲಿಮ್ ಇಂಜಿನಿಯರ್: ಪ್ರಾಧಿಕಾರದಿಂದ ಕಡೆಗಣನೆ

ನವದೆಹಲಿ: ಏಷ್ಯಾದ ಮೊದಲ ಹೈಬ್ರೀಡ್ ಪ್ಲೈಯಿಂಗ್ ಕಾರನ್ನು ಆವಿಷ್ಕರಿಸಿದ ಮುಹಮ್ಮದ್ ಫುರ್ಖಾನ್ ಶೋಯೆಬ್ ಎಂಬವರಿಗೆ ಮುಸ್ಲಿಮ್ ಎಂಬ ಕಾರಣಕ್ಕೆ ಅವರನ್ನು ಪರಿಗಣಿಸುವಲ್ಲಿ ಅಸಡ್ಡೆ ತೋರಿದೆ. ಮಾತ್ರವಲ್ಲ ಅವರ ಸಾಧನೆಯನ್ನು ಭಾರತೀಯ ಮಾಧ್ಯಮಗಳೂ ಗುರುತಿಸುವಲ್ಲಿ ವಿಫಲವಾಗಿವೆ.

ವಿನತಾ ಏರೋಮೊಬಿಲಿಟಿ ಎಂಬ ಕಂಪೆನಿ ಇತ್ತೀಚೆಗೆ ಏಷ್ಯಾದಲ್ಲೇ ಮೊದಲ ಹೈಬ್ರಿಡ್ ಪ್ಲೈಯಿಂಗ್ ಕಾರನ್ನು ವಿನ್ಯಾಸಗೊಳಿಸಿದೆ. ಇದರಲ್ಲಿ ಭಾರತೀಯ ಇಂಜಿನಿಯರ್ ಮುಹಮ್ಮದ್ ಫುರ್ಖಾನ್ ಶೋಯೆಬ್ ಅವರು ತಂತ್ರಜ್ಞಾನ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

ಈ ಅಭೂತಪೂರ್ವ ಸಾಧನೆಗೆ ಭಾರತ ಜಗತ್ತಿನ ಎದುರಲ್ಲಿ ಪ್ರಖ್ಯಾತಿ ಹೊಂದಿತ್ತು ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರನ್ನು ಕಂಪೆನಿಯ ಸಾಧನೆಯನ್ನು ಹೊಗಳಿದ್ದರು.

ಪ್ರಸ್ತುತ ಈ ಕಾರು ಹೈಬ್ರಿಡ್ ಕಾರು ಗಂಟೆಗೆ 120 ಕಿ.ಮೀ ವೇಗದಲ್ಲಿ ಓಡಾಟ ನಡೆಸುತ್ತದೆ. ಮಾತ್ರವಲ್ಲ ಅಕ್ಟೋಬರ್ 5 ರಂದು ಲಂಡನ್ ನ ಹೆಲಿಟೆಕ್ ಏಕ್ಸ್ ಪೋ ದಲ್ಲಿ ಪ್ರದರ್ಶನ ನಡೆಸಲಾಗುತ್ತಿದೆ.

ಈ ಮಧ್ಯೆ ಉತ್ತರಪ್ರದೇಶ ಮೂಲದ ಮುಹಮ್ಮದ್ ಫುರ್ಖಾನ್ ಅವರನ್ನು ವಿನತಾ ಏರೋಮೊಬಿಲಿಟಿಯಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ನೇಮಿಸಲಾಗಿದ್ದು, ಆದರೆ ಭಾರತದಲ್ಲಿ ಅವರನ್ನು ಕಡೆಗಣಿಸಲಾಗಿದೆ.

Join Whatsapp
Exit mobile version