‘ಭಾರತ ತಾಲಿಬಾನಿಗಳನ್ನು ಭೇಟಿ ಮಾಡಿದ್ದು ನಿಜ’ : ದೃಢಪಡಿಸಿದ ಕತಾರ್ ರಾಯಭಾರಿ

Prasthutha|

ದೋಹಾ: ಅಫ್ಘಾನಿಸ್ಥಾನದ ತಾಲಿಬಾನ್ ನಾಯಕತ್ವದೊಂದಿಗೆ ಭಾರತದ ವಿದೇಶಾಂಗ ಸಚಿವ ಎಸ್. ಜಯ್ ಶಂಕರ್ ಮಾತುಕತೆ ನಡೆಸಿರುವುದಾಗಿ ಕತಾರ್ ರಾಯಭಾರಿ ದೃಢಪಡಿಸಿದ್ದಾರೆ.

- Advertisement -

ಕತಾರ್ ರಾಜಧಾನಿ ದೋಹಾದಲ್ಲಿ ಮಾತುಕತೆ ನಡೆದಿದೆ ಎಂದು ಕತಾರ್‌ನ ವಿಶೇಷ ರಾಯಭಾರಿ ಮುತ್ಲಕ್ ಬಿನ್ ಮಾಜಿದ್ ಅಲ್-ಕಹ್ತಾನಿ ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ. ಈ ಹಿಂದೆ ಭಾರತವು ತಾಲಿಬಾನ್ ನಾಯಕತ್ವದೊಂದಿಗೆ ನೇರ ಮಾತುಕತೆ ಆರಂಭಿಸಿದೆ ಎಂದು ವರದಿಯಾಗಿದ್ದರೂ ಇದು ಮೊದಲ ಅಧಿಕೃತ ದೃಢೀಕರಣವಾಗಿದೆ.

ಕಳೆದ ಎರಡು ವಾರಗಳಲ್ಲಿ ಭಾರತೀಯ ವಿದೇಶಾಂಗ ಸಚಿವ ಎಸ್.ಜಯ್ ಶಂಕರ್ ಎರಡು ಬಾರಿ ಕತಾರ್‌ಗೆ ಭೇಟಿ ನೀಡಿದ್ದರು. ಈ ತಿಂಗಳ 9 ಮತ್ತು 15 ರಂದು ಕುವೈತ್ ಮತ್ತು ಕೀನ್ಯಾ ಪ್ರವಾಸದಲ್ಲಿದ್ದ ಸಚಿವರು ತಾಲಿಬಾನಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಅವರು ಕತಾರ್ ಮತ್ತು ಅಮೆರಿಕದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು.

- Advertisement -

ಆದರೆ, ಕಹ್ತಾನಿಯ ದೃಢೀಕರಣಕ್ಕೆ ಭಾರತದ ವಿದೇಶಾಂಗ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಫ್ಘಾನಿಸ್ತಾನದ ಭವಿಷ್ಯದಲ್ಲಿ ತಾಲಿಬಾನ್ ಪ್ರಮುಖ ಪಾತ್ರ ವಹಿಸಲಿರುವುದರಿಂದ ಸಚಿವರು ಚರ್ಚೆ ನಡೆಸಿರಬಹುದೆಂದು ಕಹ್ತಾನಿ ಹೇಳಿದ್ದಾರೆ. “ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಹಿಡಿತ ಸಾಧಿಸುವ ಸಾಧ್ಯತೆಯಿಲ್ಲ. ಆದರೆ ಅಫ್ಘಾನಿಸ್ತಾನದ ಭವಿಷ್ಯದಲ್ಲಿ ತಾಲಿಬಾನ್ ಪ್ರಮುಖ ಪಾತ್ರ ವಹಿಸಲಿದೆ. ಅಫ್ಘಾನಿಸ್ತಾನದ ಎಲ್ಲಾ ವಿಭಾಗಗಳಲ್ಲಿ ವಿಶ್ವಾಸ ಗಳಿಸುವ ಉದ್ದೇಶದಿಂದ ಭಾರತ ಈ ಮಾತುಕತೆ ನಡೆಸಿರಬಹುದು” ಎಂದು ಕಹ್ತಾನಿ ಹೇಳಿದ್ದಾರೆ.



Join Whatsapp