Home ಟಾಪ್ ಸುದ್ದಿಗಳು ಭಾರತದ ಸೇನಾ ಸಿಬ್ಬಂದಿ ಮೇ 10ರೊಳಗೆ ವಾಪಸ್: ಮಾಲ್ದೀವ್ಸ್ ಅಧ್ಯಕ್ಷ

ಭಾರತದ ಸೇನಾ ಸಿಬ್ಬಂದಿ ಮೇ 10ರೊಳಗೆ ವಾಪಸ್: ಮಾಲ್ದೀವ್ಸ್ ಅಧ್ಯಕ್ಷ

ಮಾಲೆ: ಮಾಲ್ದೀವ್ಸ್‍ನಲ್ಲಿ ನೆಲೆಗೊಳಿಸಿರುವ ತನ್ನ ತುಕಡಿಯನ್ನು ಹಿಂದಕ್ಕೆ ಪಡೆಯುವಂತೆ ಭಾರತವನ್ನು ಅಧಿಕೃತವಾಗಿ ಕೋರಿದ್ದೇವೆ. ಈ ನಿಟ್ಟಿನಲ್ಲಿ ಪ್ರಕ್ರಿಯೆ ಮುಂದುವರಿದಿದ್ದು, ಒಂದು ವಾಯುಯಾನ ನೆಲೆಯಲ್ಲಿ ಇರುವ ಭಾರತದ ಸೇನಾ ಸಿಬ್ಬಂದಿ ಮಾರ್ಚ್ 10ರ ಒಳಗೆ ಭಾರತಕ್ಕೆ ವಾಪಸಾಗಲಿದ್ದಾರೆ. ಉಳಿದ ಎರಡು ನೆಲೆಗಳಲ್ಲಿ ಇರುವ ಸೇನಾ ಸಿಬ್ಬಂದಿ ಮೇ 10ರ ಒಳಗೆ ವಾಪಾಸು ತೆರಳಲಿದ್ದಾರೆ ಎಂದು ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ಹೇಳಿದ್ದಾರೆ.

ಸಂಸತ್ತನ್ನು ಉದ್ದೇಶಿಸಿ ಮಾಡಿದ ಚೊಚ್ಚಲ ಭಾಷಣದಲ್ಲಿ ಮುಹಮ್ಮದ್ ಮುಯಿಝ್ಝು , ತನ್ನ ಭಾರತ ವಿರೋಧಿ ನಿಲುವನ್ನು ಪುನರುಚ್ಚರಿಸಿದ್ದು, ದೇಶದ ಸಾರ್ವಭೌಮತ್ವದಲ್ಲಿ ಯಾವುದೇ ಹಸ್ತಕ್ಷೇಪಕ್ಷೆ ಅವಕಾಶವಿಲ್ಲ ಎಂದಿದ್ದಾರೆ.

ಮಾಲ್ದೀವ್ಸ್ ಜನರ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಕಾಪಾಡುವುದು ಅಧ್ಯಕ್ಷನಾಗಿ ತನ್ನ ಪ್ರಥಮ ಆದ್ಯತೆಯಾಗಿದೆ. ಮಿಲಿಟರಿಯ ವಿಶೇಷ ಆರ್ಥಿಕ ವಲಯದಲ್ಲಿ 24 ಗಂಟೆಯೂ ಗಸ್ತು ನಡೆಸಲು ಮಾಲ್ದೀವ್ಸ್ ಮಿಲಿಟರಿಯ ಸಾಮಥ್ರ್ಯವನ್ನು ವೃದ್ಧಿಸಲಾಗುವುದು ಎಂದ ಅವರು, ತಮ್ಮ ಸರಕಾರದ `ಮಾಲ್ದೀವ್ಸ್ ಪರ’ ಕಾರ್ಯನೀತಿಯಲ್ಲಿ ಅಡಕವಾಗಿರುವ ಜನರು ಮತ್ತು ದೇಶದ ಕಲ್ಯಾಣಕ್ಕೆ ಆದ್ಯತೆ ನೀಡುವ ಮಾರ್ಗದರ್ಶಿ ಸೂತ್ರವನ್ನು ಒತ್ತಿ ಹೇಳಿದರು ಎಂದು ವರದಿಯಾಗಿದೆ.

ಸಂಸತ್ತನ್ನು ಉದ್ದೇಶಿಸಿ ಅಧ್ಯಕ್ಷ ಮುಹಮ್ಮದ್ ಮುಯಿಝ್ಜು ಭಾಷಣವನ್ನು ಮಾಲ್ದೀವ್ಸ್‍ನ ಪ್ರಮುಖ ವಿಪಕ್ಷಗಳಾದ `ಮಾಲ್ದೀವಿಯನ್ ಡೆಮೊಕ್ರಟಿಕ್ ಪಾರ್ಟಿ(ಎಂಡಿಪಿ)’ ಹಾಗೂ `ದಿ ಡೆಮೊಕ್ರಾಟ್ಸ್’ ಪಕ್ಷಗಳ ಸದಸ್ಯರು ಬಹಿಷ್ಕರಿಸಿದ್ದಾರೆ.

Join Whatsapp
Exit mobile version