Home ಕ್ರೀಡೆ ಟೋಕಿಯೋ ಒಲಿಂಪಿಕ್ಸ್: ಆರ್ಚರಿಯ ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿದ ಭಾರತೀಯ ತಂಡ

ಟೋಕಿಯೋ ಒಲಿಂಪಿಕ್ಸ್: ಆರ್ಚರಿಯ ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿದ ಭಾರತೀಯ ತಂಡ

ಟೋಕಿಯೋ, ಜು26: ಟೋಕಿಯೋ ಒಲಿಂಪಿಕ್ಸ್ ಆರ್ಚರಿಯಲ್ಲಿ ಪುರುಷರ ವಿಭಾಗದಲ್ಲಿ ಭಾರತದ ಹೋರಾಟ ಕ್ವಾರ್ಟರ್ ಫೈನಲ್ ನಲ್ಲಿ ಅಂತ್ಯಗೊಂಡಿದೆ.


ಕ್ವಾರ್ಟರ್ ಪೈನಲ್ನಲ್ಲಿ ಪ್ರವೀಣ್ ಜಾಧವ್, ಅತಾನು ದಾಸ್ ಹಾಗೂ ತರುಣ್ ದೀಪ್ ರಾಯ್ ಅವರನ್ನೊಳಗೊಂಡ ತಂಡ ದಕ್ಷಿಣ ಕೊರಿಯಾದ ವಿರುದ್ಧ 6-0 ಅಂತರದಲ್ಲಿ ಸುಲಭವಾಗಿ ಶರಣಾಗಿದೆ. ಆ ಮೂಲಕ ಭಾರತೀಯರ ಸೆಮಿಪೈನಲ್ ಪ್ರವೇಶದ ಕನಸು ಭಗ್ನವಾಗಿದೆ.


ಪಂದ್ಯದ ಆರಂಭದಿಂದಲೇ ನಿಖರವಾಗಿ ಗುರಿ ಇಟ್ಟ ಕೊರಿಯನ್ ತಂಡ ಎಲ್ಲಾ ಸುತ್ತುಳಲ್ಲೂ ಪಾರಮ್ಯ ಮೆರೆಯಿತು. ಇನ್ನು ಇದಕ್ಕೂ ಮೊದಲು ನಡೆದ ಎಲಿಮಿನೇಷನ್ ಹಂತದಲ್ಲಿ ಕಜಾಕಿಸ್ತಾನ ತಂಡದ ವಿರುದ್ಧ ಭಾರತ 6-2 ಅಂತರದಲ್ಲಿ ಗೆದ್ದು ಅಂತಿಮ ಎಂಟರ ಹಂತವನ್ನು ಪ್ರವೇಶಿಸಿತ್ತು.

Join Whatsapp
Exit mobile version