Home ಕ್ರೀಡೆ ಹಾಕಿ ವಿಶ್ವಕಪ್| ಗೆಲುವಿನ ಅಭಿಯಾನ ಆರಂಭಿಸಿದ ಭಾರತ

ಹಾಕಿ ವಿಶ್ವಕಪ್| ಗೆಲುವಿನ ಅಭಿಯಾನ ಆರಂಭಿಸಿದ ಭಾರತ

ರೂರ್ಕೆಲಾ: ಪುರುಷರ ಹಾಕಿ ವಿಶ್ವಕಪ್ ಒಡಿಶಾದಲ್ಲಿ ಆರಂಭವಾಗಿದ್ದು, ಆತಿಥೇಯ ಭಾರತ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ.

ಎರಡು ಗೋಲುಗಳಿಂದ ಸ್ಪೇನ್ ತಂಡವನ್ನು ಸೋಲಿಸಿದ ಭಾರತ ತನ್ನ ಗೆಲುವಿನ ಅಭಿಯಾನವನ್ನು ಆರಂಭಿಸಿದೆ.  ಭಾರತ ಪರ ಅಮಿತ್ ರೋಹಿದಾಸ್ ಮತ್ತು ಹಾರ್ದಿಕ್ ಸಿಂಗ್ ಗೋಲು ಗಳಿಸಿದರು.

ಇತರ ಪಂದ್ಯಗಳಲ್ಲಿ ಅರ್ಜೆಂಟೀನಾ 1-0 ಗೋಲುಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿತು. ಆಸ್ಟ್ರೇಲಿಯವು ಫ್ರಾನ್ಸ್‌ನ್ನು 8-0 ಗೋಲುಗಳಿಂದ ಸೋಲಿಸಿತು. ಇಂಗ್ಲೆಂಡ್ ವೇಲ್ಸ್ ತಂಡದ ವಿರುದ್ಧ 5-0 ಅಂತರದಲ್ಲಿ ಜಯ ಸಾಧಿಸಿದೆ. 




Join Whatsapp
Exit mobile version