Home ಟಾಪ್ ಸುದ್ದಿಗಳು ಭಾರತ – ಪಾಕ್ ಕ್ರಿಕೆಟ್ ಪಂದ್ಯ| ತ್ರಿವರ್ಣ ಧ್ವಜ ಪಡೆಯಲು ನಿರಾಕರಿಸಿದ ಅಮಿತ್ ಶಾ ಪುತ್ರ...

ಭಾರತ – ಪಾಕ್ ಕ್ರಿಕೆಟ್ ಪಂದ್ಯ| ತ್ರಿವರ್ಣ ಧ್ವಜ ಪಡೆಯಲು ನಿರಾಕರಿಸಿದ ಅಮಿತ್ ಶಾ ಪುತ್ರ ಜಯ್ ಶಾ: ವ್ಯಾಪಕ ಟೀಕೆ

ದುಬೈ: ದುಬೈಯಲ್ಲಿ ನಿನ್ನೆ ನಡೆದಿದ್ದ ಏಷ್ಯಾ ಕಪ್ ನ ದ್ವಿತೀಯ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನವನ್ನು 5 ವಿಕೆಟ್ ಗಳಿಂದ ಸೋಲಿಸಿತ್ತು. ಮೈದಾನದಲ್ಲಿದ್ದಂತಹ ಕ್ರಿಕೆಟ್ ಅಭಿಮಾನಿಗಳು ಭಾರತದ ಗೆಲುವನ್ನು ಸಂಭ್ರಮಿಸುತ್ತಿದ್ದರು. ಈ ವೇಳೆ ಬಿಸಿಸಿಐ ಮುಖ್ಯಸ್ಥ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ಅವರಿಗೆ ಪಕ್ಕದಲ್ಲಿದ್ದಂತಹ ವ್ಯಕ್ತಿಯೊಬ್ಬರು ತ್ರಿವರ್ಣ ಧ್ವಜವನ್ನು ಕೈಯ್ಯಲ್ಲಿ ಹಿಡಿದುಕೊಂಡು ಸಂಭ್ರಮಿಸುವಂತೆ ಧ್ವಜವೊಂದನ್ನು ನೀಡುತ್ತಾರೆ. ಆದರೆ ಜಯ್ ಶಾ ಅವರು ಅದನ್ನು ಪಡೆಯಲು ನಿರಾಕರಿಸುತ್ತಾರೆ. ದೇಶದ ಗೃಹ ಮಂತ್ರಿಯಾಗಿರುವ ಅಮಿತ್ ಶಾ ಅವರ ಪುತ್ರನಾಗಿರುವ ಜಯ್ ಶಾ ಅವರ ಈ ನಡೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬಹಿರಂಗವಾಗಿ ತ್ರಿವರ್ಣ ಧ್ವಜ ಪಡೆಯಲು ನಿರಾಕರಿಸಿ ಆ ಮೂಲಕ ಭಾರತದ ಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂದು ನೆಟ್ಟಿಗರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಲವು ಟ್ವಿಟ್ಟರ್ ಬಳಕೆದಾರರು ಕೂಡ ಜಯ್ ಶಾ ಅವರ ಈ ನಡೆಯನ್ನು ಟೀಕಿಸಿದ್ದಾರೆ. ಒಂದು ವೇಳೆ ಇದನ್ನು ಬಿಜೆಪಿಯೇತರ ಯಾರಾದರೂ ಮಾಡಿದ್ದರೆ ಬಿಜೆಪಿ ಐಟಿ ಸೆಲ್ ಸದಸ್ಯರು ಅವರನ್ನು ದೇಶದ್ರೋಹಿಗಳ ಪಟ್ಟ ನೀಡುತ್ತಿತ್ತು ಎಂದು ಕೆಲವರು ಟೀಕಿಸಿದ್ದಾರೆ.   

ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ. ವಿ. ಶ್ರೀನಿವಾಸ್ ಅವರು ವೀಡಿಯೋವನ್ನು ಪೋಸ್ಟ್ ಮಾಡಿ “ನಿಮ್ಮ ಪರಂಪರೆ, ನಿಮ್ಮ ಬೇರುಗಳು ಮತ್ತು ನಿಮ್ಮ ಪೂರ್ವಜರನ್ನು ಅರ್ಥಮಾಡಿಕೊಳ್ಳುವುದು ನಿಮ್ಮ ಭವಿಷ್ಯವನ್ನು ರೂಪಿಸುವ ಪ್ರಮುಖ ಭಾಗವಾಗಿದೆ.” ಎಂದು ಟ್ವೀಟಿಸಿದ್ದಾರೆ

Join Whatsapp
Exit mobile version