Home ಟಾಪ್ ಸುದ್ದಿಗಳು ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲೂ ಭಾರತಕ್ಕೆ ರೋಚಕ ಜಯ!

ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲೂ ಭಾರತಕ್ಕೆ ರೋಚಕ ಜಯ!

ನವದೆಹಲಿ : ಆಸ್ಟ್ರೇಲಿಯಾದ ಬ್ರಿಸ್ಬೇನ್ ನ ಗಬ್ಬಾದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಮತ್ತು ಅಂತಿಮ, ಐದನೇ ದಿನದ ಟೆಸ್ಟ್ ಪಂದ್ಯಾವಳಿಯಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ಲಭಿಸಿದೆ.

ಭಾರತೀಯ ಆಟಗಾರರ ಉತ್ತಮ ಆಟದಿಂದ ವಿಜಯ ಭಾರತದ ಪಾಲಾಗಿದೆ. ಅರ್ಧ ಶತಕ ಬಾರಿಸಿದ ರಿಷಬ್ ಪಂತ್ ಭಾರತ ತಂಡವನ್ನು ಗೆಲುವಿನ ಹಂತಕ್ಕೆ ಕೊಂಡೊಯ್ದರು.

ಶುಭಮನ್ (91), ನಾಯಕ ಅಜಿಂಕ್ಯ ರಹಾನೆ (24), ಚೇತೇಶ್ವರ್ ಪೂಜಾರ (56) ಔಟಾದ ಬಳಿಕ ರಿಷತ್ ಪಂತ್ ಕಣಕ್ಕಿಳಿದಿದ್ದರು.

ಆಸ್ಟ್ರೇಲಿಯಾ ತಂಡ ನೀಡಿದ್ದ 328 ರನ್ ಗಳ ಗುರಿಯನ್ನು ಬೆನ್ನತ್ತಿದ ಭಾರತ ಅತ್ಯುತ್ತಮ ಪ್ರದರ್ಶನ ತೋರಿದೆ. ಇನ್ನೂ 18 ಎಸೆತಗಳು ಬಾಕಿಯಿರುವಾಗಲೇ ಭಾರತ ಗೆಲುವಿನ ದಡ ಮುಟ್ಟಿದೆ.

ಗೆಲ್ಲಲು 25 ಎಸೆತಕ್ಕೆ 10 ರನ್ ಬಾಕಿಯಿರುವಾಗ ವಾಷಿಂಗ್ಟನ್ ಸುಂದರ್ ನಿರ್ಗಮಿಸಿದರಾದರೂ, ನಂತರ ಬಂದ ಶಾರ್ದೂಲ್ ಠಾಕೂರ್, ರಿಷಬ್ ಪಂತ್ ಗೆ ಸಾಥ್ ನೀಡಿದರು.

ಈ ಗೆಲುವಿನ ಮೂಲಕ ಟೆಸ್ಟ್ ಸರಣಿ ಭಾರತದ ಪಾಲಾಗಿದೆ.

Join Whatsapp
Exit mobile version