Home ಟಾಪ್ ಸುದ್ದಿಗಳು ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತ; ಉಭಯ ದೇಶಗಳ ನಡುವಿನ ಸಂಘರ್ಷ ಕೊನೆಗೊಳಿಸುವ ರಾಜತಾಂತ್ರಿಕ ಪ್ರಯತ್ನಗಳಿಗೆ...

ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತ; ಉಭಯ ದೇಶಗಳ ನಡುವಿನ ಸಂಘರ್ಷ ಕೊನೆಗೊಳಿಸುವ ರಾಜತಾಂತ್ರಿಕ ಪ್ರಯತ್ನಗಳಿಗೆ ಬೆಂಬಲ

ಹೊಸದಿಲ್ಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಇದೇ ಮೊದಲ ಬಾರಿಗೆ ರಷ್ಯಾ ವಿರುದ್ಧ ಮತ ಚಲಾಯಿಸಿದೆ. ಉಕ್ರೇನ್‌ನ ವಿಚಾರದಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತವು ಅಂತರವನ್ನು ಕಾಯ್ದುಕೊಂಡಿತ್ತು.


ಸಭೆಯಲ್ಲಿ ಮಾತನಾಡಿದ ಭಾರತದ ಪ್ರತಿನಿಧಿ ರುಚಿರಾ ಕಾಂಬೋಜ್‌, ರಷ್ಯಾ ಮತ್ತು ಉಕ್ರೇನ್‌ ಮಾತುಕತೆ ಮೂಲಕ ಬಿಕ್ಕಟ್ಟು ಪರಿಹರಿಸಬೇಕು. ಆಯಾ ರಾಷ್ಟ್ರ ಗಳ ಸಾರ್ವಭೌಮತ್ವವನ್ನು ಗೌರವಿಸಬೇಕು ಎಂದು ಹೇಳಿದರು.


ಸಭೆ ಪ್ರಾರಂಭವಾಗುತ್ತಿದ್ದಂತೆ, ವಿಶ್ವಸಂಸ್ಥೆಯ ರಷ್ಯಾದ ರಾಯಭಾರಿ ವಾಸಿಲಿ ಎ ನೆಬೆಂಜಿಯಾ ಅವರು ವಿಡಿಯೋ ಟೆಲಿಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಉಕ್ರೇನಿಯನ್ ಅಧ್ಯಕ್ಷರ ಭಾಗವಹಿಸುವಿಕೆಯ ಬಗ್ಗೆ ಕಾರ್ಯವಿಧಾನದ ಮತವನ್ನು ಕೋರಿದರು.

ಫೆ.24ರಂದು ರಷ್ಯಾ ಉಕ್ರೇನ್‌ ಮೇಲೆ ದಾಳಿ ಶುರು ಮಾಡಿದ ಬಳಿಕ ಆ ವಿಚಾರದ ಬಗ್ಗೆ ಚರ್ಚೆ ನಡೆಸಲು ಸೇರಿದ್ದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಗೆ ಭಾರತದ ಪ್ರತಿನಿಧಿಗಳು ಗೈರಾಗಿದ್ದರು.ಭಾರತವು ಪ್ರಸ್ತುತ ಯುಎನ್‌ಎಸ್‌ಸಿಯ ಎರಡು ವರ್ಷಗಳ ಅವಧಿಗೆ ಶಾಶ್ವತವಲ್ಲದ ಸದಸ್ಯನಾಗಿದ್ದು, ಡಿಸೆಂಬರ್‌ನಲ್ಲಿ ಕೊನೆಗೊಳ್ಳಲಿದೆ.

ಉಕ್ರೇನ್‌ ವಿರುದ್ಧದ ದಾಳಿ ಮುಂದುವರಿದಿರುವಂತೆಯೇ ರಷ್ಯಾ ಅಧ್ಯಕ್ಷ ಪುಟಿನ್‌ ದೇಶದ ಸೇನೆಯ ಸಂಖ್ಯಾಬಲ ಹೆಚ್ಚಿಸುವಂತೆ ಅದೇಶ ನೀಡಿದ್ದಾರೆ. ಇನ್ನೊಂದೆಡೆ ಉಕ್ರೇನ್‌ನ ರೈಲು ನಿಲ್ದಾಣದ ಮೇಲೆ ನಡೆದ ಕ್ಷಿಪಣಿ ದಾಳಿಯಿಂದ ಮೃತಪಟ್ಟವರ ಸಂಖ್ಯೆ 25ಕ್ಕೇರಿದೆ.

ಉಕ್ರೇನ್ ವಿರುದ್ಧದ ಆಕ್ರಮಣಕ್ಕಾಗಿ ರಷ್ಯಾವನ್ನು ಭಾರತ ಇದುವರೆಗೂ ಟೀಕಿಸಿಲ್ಲ. ರಾಜತಾಂತ್ರಿಕತೆ ಮತ್ತು ಸಂವಾದದ ಹಾದಿಗೆ ಮರಳಲು ರಷ್ಯಾ ಮತ್ತು ಉಕ್ರೇನ್ ದೇಶಗಳಿಗೆ ಭಾರತ ಹಲವಾರು ಬಾರಿ ಕರೆ ನೀಡಿ ಉಭಯ ದೇಶಗಳ ನಡುವಿನ ಸಂಘರ್ಷವನ್ನು ಕೊನೆಗೊಳಿಸುವ ಎಲ್ಲಾ ರಾಜತಾಂತ್ರಿಕ ಪ್ರಯತ್ನಗಳಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.

Join Whatsapp
Exit mobile version