ನವದೆಹಲಿ: ಕೆನಡಾ ದೇಶದಲ್ಲಿ ಸಾಕಷ್ಟು ಮಂದಿ ಸಿಖ್ ಸಮುದಾಯದವರಿದ್ದಾರೆ. ಕೆನಡಾದಲ್ಲಿ ಭಾರತ ವಿರೋಧಿ ಧೋರಣೆ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಕೆನಡಾ ಸರ್ಕಾರ ಮುಂದಾಗಬೇಕು ಎಂದು ಭಾರತ ಸರ್ಕಾರ ಮನವಿ ಮಾಡಿದೆ.
ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಗದ್ದರ್ ಹೋರಾಟ ಆರಂಭಿಸಿದವರು ಮತ್ತು ಅದಕ್ಕೆ ಹಣಕಾಸು ನೆರವು ನೀಡಿದವರು ಸಿಖ್ಖರು. ಸ್ವತಂತ್ರ ಭಾರತದಲ್ಲಿ ಸ್ವತಂತ್ರ ಖಲಿಸ್ತಾನ್ ಹೋರಾಟ ಆರಂಭವಾದಾಗ ಅದಕ್ಕೆ ಹೆಚ್ಚಿನ ಬೆಂಬಲ ದೊರೆತದ್ದು ಕೂಡ ಈ ಕೆನಡಾದ ಸಿಖ್ ರಿಂದಲೆ ಎಂಬುದು ಸರ್ಕಾರದ ವಾದ.
ಇತ್ತೀಚೆಗೆ ಕೆನಡಾದಲ್ಲಿ ಭಾರತ ವಿರೋಧಿ ದಾಳಿಗಳು ಸಾಕಷ್ಟು ಜನರನ್ನು ಗಾಸಿಗೊಳಿಸಿವೆ. ಇದಕ್ಕೆ ಕಾರಣರು ಈ ಖಲಿಸ್ತಾನ್ ಬೆಂಬಲಿಗ ಸಿಖ್ ಎಂಬುದು ಭಾರತ ಸರಕಾರದ ವಾದ. ಆದರೆ ಹಿಂದುತ್ವ ವಾದ ಬಲಗೊಳ್ಳುತ್ತಿರುವುದು ಭಾರತೀಯರ ಮೇಲೆ ದಾಳಿ ನಡೆಯಲು ಮುಖ್ಯ ಕಾರಣವೆನ್ನಲಾಗಿದೆ. ಕೆನಡಾವಲ್ಲದೆ ಯುಎಸ್ ಎ, ಬ್ರಿಟನ್ ಮೊದಲಾದೆಡೆಯೂ ಇತ್ತೀಚೆಗೆ ಭಾರತೀಯರ ಮೇಲೆ ದಾಳಿ ಆಗುತ್ತಿವೆ.
ಈ ಭಾರತೀಯರ ಮೇಲಿನ ದಾಳಿಯಲ್ಲಿ ಸಿಖ್ ಕುಟುಂಬಗಳನ್ನು ಕೊಲ್ಲುತ್ತಿರುವುದು ಕಂಡು ಬಂದಿದೆ. ಆದರೆ ಭಾರತ ಸರಕಾರವು ರಾಯಭಾರಿ ಮಟ್ಟದಲ್ಲಿ ಕೆನಡಾದ ಖಲಿಸ್ತಾನಿಗಳು ಭಾರತೀಯರ ಮೇಲೆ ದಾಳಿ ಮಾಡದಂತೆ ತಡೆಯಿರಿ ಎಂಬ ಮನವಿಯನ್ನು ಮಾತ್ರ ಮಾಡಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿಯವರು “ಖಲಿಸ್ತಾನ ವಾದವು ಉಗ್ರ ಸಂಬಂಧದ್ದಾಗಿದೆ. ನಾವು ಇದರಲ್ಲಿ ಸ್ಪಷ್ಟವಿದ್ದೇವೆ. ಕೆನಡಾ ಸರಕಾರಕ್ಕೆ ಖಲಿಸ್ತಾನ್ ವಾದಿಗಳನ್ನು ಮಟ್ಟ ಹಾಕುವಂತೆ ಮನವಿ ಮಾಡಿದ್ದೇವೆ” ಎಂದಿದ್ದಾರೆ.