ನವದೆಹಲಿ: 4ಜಿಗಿಂತಲೂ 10ಪಟ್ಟು ವೇಗ ಮತ್ತು ಸಾಮರ್ಥ್ಯವನ್ನು ಹೊಂದಿರುವ 5ಜಿ ಸೇವೆಯು ಭಾರತದಲ್ಲಿ 2023ರ ಮಾರ್ಚ್ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಸಿಗಲಿದೆ ಎಂದು ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 5ಜಿ ಸ್ಪೆಕ್ಟ್ರಮ್ ಹರಾಜು ಜುಲೈ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದರು.
ಇದೀಗ ಭಾರತವು ತನ್ನದೇ ಆದ 4ಜಿ ಸ್ಟಾಕರ್’ಗಳಾದ ರೇಡಿಯೋ ಉಪಕರಣಗಳು ಮತ್ತು ಹ್ಯಾಂಡ್’ಸೆಟ್ ಗಳನ್ನು ಹೊಂದಿದ್ದು, 5ಜಿ ಹ್ಯಾಂಟ್’ಸೆಟ್ ಗಳು ದೇಶದಲ್ಲಿ ಸಿದ್ಧವಾಗಿದೆ . 2023ರ ಮಾರ್ಚ್ ವೇಳೆ ಸಂಪೂರ್ಣವಾಗಿ ನಾವು 5ಜಿ ಸೇವೆಯನ್ನು ದೇಶದಲ್ಲಿ ಪಡೆಯಲಿದ್ದೇವೆ ಎಂದು ವೈಷ್ಣವ್ ಹೇಳಿದರು.
ಕೇಂದ್ರ ಸಚಿವ ಸಂಪುಟವು ದೂರಸಂಪರ್ಕ ಇಲಾಖೆಯ 5ಜಿ ತರಂಗಾಂತರ ಹರಾಜಿಗೆ ಅಂತಿಮವಾಗಿ ಅನುಮೋದನೆಯನ್ನು ನೀಡಿದೆ. ಅದರ ಮೂಲಕ ಸಾರ್ವಜನಿಕರಿಗೆ ಮತ್ತು ಉದ್ಯಮಗಳಿಗೆ 5ಜಿ ಸೇವೆಗಳನ್ನು ಒದಗಿಸುವ ಸಲುವಾಗಿ ಬಿಡ್‌ದಾರರಿಗೆ ಸ್ಪೆಕ್ಟ್ರಮ್ ಅನ್ನು ನಿಯೋಜಿಸಲಾಗುವುದು ಎಂದು ಸಚಿವ ವೈಷ್ಣವ್ ತಿಳಿಸಿದರು.