Home ಟಾಪ್ ಸುದ್ದಿಗಳು ದೇಶದಲ್ಲಿ ಪ್ರತಿನಿತ್ಯ 82 ಕೊಲೆ, 86 ಅತ್ಯಾಚಾರ, ಗಂಟೆಗೆ ಒಂದರಂತೆ ಅಪಹರಣ: NCRB ಆತಂಕಕಾರಿ ಅಂಕಿಅಂಶ...

ದೇಶದಲ್ಲಿ ಪ್ರತಿನಿತ್ಯ 82 ಕೊಲೆ, 86 ಅತ್ಯಾಚಾರ, ಗಂಟೆಗೆ ಒಂದರಂತೆ ಅಪಹರಣ: NCRB ಆತಂಕಕಾರಿ ಅಂಕಿಅಂಶ ಬಹಿರಂಗ

ನವದೆಹಲಿ: ದೇಶದಲ್ಲಿ ಪ್ರತಿನಿತ್ಯ ಕೊಲೆ, ಅತ್ಯಾಚಾರ, ಡಕಾಯತಿ, ದರೋಡೆ, ಅಪಹರಣ ಸೇರಿದಂತೆ ವಿವಿಧ ಕ್ರಿಮಿನಲ್ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ ವಿಸ್ತೃತ ವರದಿಯೊಂದನ್ನು ಬಿಡುಗಡೆಗೊಳಿಸಿದೆ. ಇದರನ್ವಯ 2021ರಲ್ಲಿ ಭಾರತದಲ್ಲಿ ದಿನಂಪ್ರತಿ ಸರಾಸರಿ 82 ಕೊಲೆ, 86 ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ ಎಂಬ ಆತಂಕಕಾರಿ ಅಂಶಗಳು ಬಹಿರಂಗವಾಗಿವೆ.

ಉತ್ತರ ಪ್ರದೇಶ, ಬಿಹಾರದಲ್ಲಿ ಅತೀ ಹೆಚ್ಚಿನ ಹತ್ಯೆ ಪ್ರಕರಣಗಳು ದಾಖಲಾಗಿದ್ದು, ಅಸ್ಸಾಮ್ ಹೊರತುಪಡಿಸಿ ಈಶಾನ್ಯ ರಾಜ್ಯ ಮತ್ತು ದಕ್ಷಿಣದ ಕೇರಳದಲ್ಲಿ ಅತೀ ಕಡಿಮೆ ಕೊಲೆ ನಡೆದಿದೆಯೆಂದು ಉಲ್ಲೇಖಿಸಲಾಗಿದೆ.

ಈ ಮಧ್ಯೆ 2021 ರ ಅವಧಿಯಲ್ಲಿ ಕರ್ನಾಟಕದಲ್ಲಿ 1357 ಕೊಲೆ ಪ್ರಕರಣ, 555 ಅತ್ಯಾಚಾರ ಪ್ರಕರಣಗಳು ದಾಖಲಿಸಲಾಗಿದ್ದು, ಜೋಡಿ ಕೊಲೆ ಪ್ರಕರಣ ಕಡಿಮೆ ಪ್ರಮಾಣದಲ್ಲಿದೆ.

ಇನ್ನು ಅತೀ ಹೆಚ್ಚು ಕೊಲೆ ಪ್ರಕರಣ ದಾಖಲಿಸಲ್ಪಟ್ಟ ರಾಜ್ಯಗಳ ವಿವರ ಇಲ್ಲಿವೆ.


1) ಉತ್ತರಪ್ರದೇಶ: 3,717
2) ಬಿಹಾರ: 2799
3) ಮಹಾರಾಷ್ಟ್ರ: 2330
4) ಮಧ್ಯಪ್ರದೇಶ 2034
5) ಪಶ್ಚಿಮ ಬಂಗಾಳ: 1884
6) ಕರ್ನಾಟಕ: 1357
7) ತಮಿಳುನಾಡು: 1686
8) ತೆಲಂಗಾಣ: 1026
9) ಆಂಧ್ರ: 956
10) ಕೇರಳ: 337
11) ಒಡಿಶಾ: 1394
12) ಛತ್ತೀಸ್ಗಡ:1007
13) ಜಾರ್ಖಂಡ್: 1112
14) ಅಸ್ಸಾಂ: 1192
15) ಗುಜರಾತ್: 1010
16) ರಾಜಸ್ಥಾನ್: 1786
17) ಹರ್ಯಾಣ: 1112
18) ಪಂಜಾಬ್: 723
19) ಉತ್ತರಾಖಂಡ್: 208
20) ಹಿಮಾಚಲಪ್ರದೇಶ: 86
21) ಜಮ್ಮು ಮತ್ತು ಕಾಶ್ಮೀರ: 136
22) ಲಡಾಕ್: 5

ಅತ್ಯಾಚಾರ ಪ್ರಕರಣಗಳು ವಿವರ ಇಲ್ಲಿವೆ

2021 ರಲ್ಲಿ ಒಟ್ಟು 31,677 ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು NCRB ವರದಿ ಮಾಡಿದೆ. ಹಿಂದಿನ ಸಾಲಿನಲ್ಲಿ 28,046 ಅತ್ಯಾಚಾರ ಪ್ರಕರಣ ದಾಖಲಿಸಲಾಗಿತ್ತು. 2021ರಲ್ಲಿ ಇದು ಅಧಿಕವಾಗಿದೆ. ಅಲ್ಲದೆ ಪ್ರತಿ ಗಂಟೆಗೆ 49 ಪ್ರಕರಣಗಳು ಮಹಿಳೆಯರ ಮೇಲೆ ಅಪರಾಧ ಪ್ರಕರಣ ದಾಖಲಾಗಿದೆ. ಅತೀ ಹೆಚ್ಚು ಅತ್ಯಾಚಾರ ಪ್ರಕರಣ ದಾಖಲಾದ ರಾಜ್ಯಗಳ ವಿವರ
1) ರಾಜಸ್ಥಾನ: 6,337
2) ಮಧ್ಯಪ್ರದೇಶ 2,947
3) ಉತ್ತರಪ್ರದೇಶ: 2,845
4) ಮಹಾರಾಷ್ಟ್ರ: 2,496
5) ದೆಹಲಿ: 1,250
6) ಕರ್ನಾಟಕ : 555
7) ಕೇರಳ : 700 ಕ್ಕೂ ಅಧಿಕ ರೇಪ್ ಪ್ರಕರಣಗಳು ದಾಖಲಾಗಿವೆ.

Join Whatsapp
Exit mobile version