Home ಟಾಪ್ ಸುದ್ದಿಗಳು ಫೆಲೆಸ್ತೀನ್ ನಿರಾಶ್ರಿತರ ಕಲ್ಯಾಣಕ್ಕಾಗಿ 2.5 ಮಿಲಿಯನ್ ಡಾಲರ್ ನೀಡಿದ ಭಾರತ

ಫೆಲೆಸ್ತೀನ್ ನಿರಾಶ್ರಿತರ ಕಲ್ಯಾಣಕ್ಕಾಗಿ 2.5 ಮಿಲಿಯನ್ ಡಾಲರ್ ನೀಡಿದ ಭಾರತ

ನವದೆಹಲಿ: ಫೆಲೆಸ್ತೀನ್ ನಿರಾಶ್ರಿತರ ಕಲ್ಯಾಣಕ್ಕಾಗಿ ಭಾರತ ಸರ್ಕಾರವು ಅಮೆರಿಕ ಮೂಲದ ಸಂಸ್ಥೆಯಾದ ಯುನೈಟೆಡ್ ನೇಷನ್ಸ್ ರಿಲೀಫ್ ಆ್ಯಂಡ್ ವರ್ಕ್ಸ್ ಏಜೆನ್ಸಿ (UNRWA) ಗೆ 2.5 ಮಿಲಿಯನ್ ಡಾಲರ್ ನೀಡಿದೆ. ಶಿಕ್ಷಣ, ಆರೋಗ್ಯ, ಪರಿಹಾರ ಮತ್ತು ಸಾಮಾಜಿಕ ಸೇವೆಗಳು ಸೇರಿದಂತೆ ಇನ್ನಿತರ ಹಲವು ಕಾರ್ಯಕ್ರಮ ಮತ್ತು ಯೋಜನೆಗಳನ್ನು ಈ ಏಜೆನ್ಸಿ ನಿರ್ವಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಫೆಲೆಸ್ತೀನ್’ನ ರಾಮಲ್ಲಾದಲ್ಲಿರುವ ಭಾರತದ ಪ್ರತಿನಿಧಿ ಕಚೇರಿಯಲ್ಲಿ UNRWA ಸಂಸ್ಥೆಯ ಯೋಜನಾ ಅಧಿಕಾರಿ ಕುಮಾರಿ ಕ್ಸು ರಾನ್ ವೂ ಅವರಿಗೆ ಈ ಹಣಕಾಸಿನ ಕೊಡುಗೆಯನ್ನು ನೀಡಲಾಯಿತು.

Join Whatsapp
Exit mobile version