Home ಟಾಪ್ ಸುದ್ದಿಗಳು ಪಾಕ್ ಆಟಗಾರನನ್ನು ಅಪ್ಪಿ ಅಭಿನಂದಿಸಿದ ಕೊಹ್ಲಿ ನಡೆಗೆ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ

ಪಾಕ್ ಆಟಗಾರನನ್ನು ಅಪ್ಪಿ ಅಭಿನಂದಿಸಿದ ಕೊಹ್ಲಿ ನಡೆಗೆ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ

ನವದೆಹಲಿ: ದುಬೈನಲ್ಲಿ ನಡೆದ ಐಸಿಸಿ ಟಿ- 20 ವಿಶ್ವಕಪ್ ಪಂದ್ಯಾಟದಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಭರ್ಜರಿ ಜಯಗಳಿಸಿದ್ದು, ಈ ವೇಳೆ ಪಾಕ್ ಆಟಗಾರ ರಿಝ್ವಾನ್ ಬಳಿ ತೆರಳಿ ಅವರನ್ನು ಅಪ್ಪಿ ಅಭಿನಂದಿಸಿದ ವಿರಾಟ್ ಕೊಹ್ಲಿ ನಡೆಯನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ.

ಇದೇ ಮೊದಲ ಬಾರಿಗೆ ಪಾಕಿಸ್ತಾನವು ಭಾರತ ವಿರುದ್ಧ ಗೆಲುವು ಸಾಧಿಸಿದೆ. ಈ ವೇಳೆ ಪಾಕ್ ಆಟಗಾರರನ್ನು ಅಭಿನಂದಿಸುವ ಸಂದರ್ಭದಲ್ಲಿ ಪಾಕಿಸ್ತಾನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರಿಝ್ವಾನ್ ಅವರನ್ನು ಅಪ್ಪಿಕೊಂಡು ಅಭಿನಂದಿಸಿದರು. ಪ್ರಸಕ್ತ ವಿರಾಟ್ ಕೊಹ್ಲಿ ಮತ್ತು ರಿಝ್ವಾನ್ ಅಪ್ಪಿಕೊಂಡಿರುವ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದೆ.

ದುಬೈನಲ್ಲಿ ನಿನ್ನೆ ನಡೆದ ಹೈವೋಲ್ಟ್ ಪಂದ್ಯಾಟದಲ್ಲಿ ಭಾರತ ಮತ್ತು ಪಾಕ್ ಪರಸ್ಪರ ಸೆಣೆಸಾಟ ನಡೆಸಿ ಪಾಕಿಸ್ತಾನವು ಭಾರತವನ್ನು 10 ವಿಕೆಟ್ ಗಳಿಂದ ಮಣಿಸಿದೆ. ಈ ಪಂದ್ಯದಲ್ಲಿ ಆರಂಭಿಕ ಆಟಗಾರರಾಗಿ ಆಗಮಿಸಿದ ಮುಹಮ್ಮದ್ ರಿಝ್ವಾನ್ ಮತ್ತು ಬಾಬರ್ ಆಝಂ ಜೋಡಿ ಪಂದ್ಯದ ಚಿತ್ರಣವನ್ನು ಬದಲಿಸಿದರು.

Join Whatsapp
Exit mobile version