Home ಟಾಪ್ ಸುದ್ದಿಗಳು ಭಾರತವನ್ನು ದೂಷಿಸುವುದಿಲ್ಲ: ಸಾಮೂಹಿಕ ಅತ್ಯಾಚಾರ ಸಂತ್ರಸ್ತ ವಿದೇಶಿ ಮಹಿಳೆ

ಭಾರತವನ್ನು ದೂಷಿಸುವುದಿಲ್ಲ: ಸಾಮೂಹಿಕ ಅತ್ಯಾಚಾರ ಸಂತ್ರಸ್ತ ವಿದೇಶಿ ಮಹಿಳೆ

ಪಾಟ್ಬಾ: ನನಗಾದ ಅನ್ಯಾಯಕ್ಕೆ ಭಾರತ ದೇಶವನ್ನು ದೂಷಿಸುವುದಿಲ್ಲ ಎಂದು ಕಳೆದ ವಾರ ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ವಿದೇಶಿ ಮಹಿಳೆ ಹೇಳಿದ್ದಾರೆ.

ತಮ್ಮ ಪತಿಯೊಂದಿಗೆ ತಮ್ಮ ಮೋಟಾರ್‌ ಸೈಕಲ್‌ನಲ್ಲಿ ಬಿಹಾರ ಮೂಲಕ ನೇಪಾಳಕ್ಕೆ ತೆರಳುವ ಮೊದಲು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಮ್ಮ ವಿಶ್ವ ಪ್ರವಾಸವನ್ನು ಮುಂದುವರಿಸುವುದಾಗಿ ತಿಳಿಸಿದ ವಿದೇಶಿ ಮಹಿಳೆ, ನಾನು ಭಾರತದಾದ್ಯಂತ ಸುಮಾರು 20,000 ಕಿಮೀ ಸುರಕ್ಷಿತವಾಗಿ ಪ್ರಯಾಣಿಸಿದ್ದೇನೆ. ಹಾಗಿರುವಾಗ ಕೆಲವೇ ಕೆಲವು ಕಾಮುಕರ ಕೃತ್ಯಕ್ಕಾಗಿ ಭಾರತವನ್ನು ದೂಷಿಸುವುದಿಲ್ಲ ಎಂದು ಹೇಳಿದ್ದಾರೆ.

ಜಾರ್ಖಂಡ್ ರಾಜಧಾನಿ ರಾಂಚಿಯಿಂದ 300 ಕಿಮೀ ದೂರದಲ್ಲಿರುವ ಹನ್ಸ್‌ದಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಮಹತ್‌ನಲ್ಲಿ 28 ವರ್ಷದ ವಿದೇಶಿ ಮಹಿಳೆ ಶುಕ್ರವಾರ ತನ್ನ ಪತಿಯೊಂದಿಗೆ ಟೆಂಟ್‌ನಲ್ಲಿ ರಾತ್ರಿ ಕಳೆಯುತ್ತಿದ್ದಾಗ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು.

Join Whatsapp
Exit mobile version