Home ಟಾಪ್ ಸುದ್ದಿಗಳು ಭಾರತಕ್ಕೆ ಮೋದಿಯವರ ಬಲವಾದ ನಾಯಕತ್ವದ ಅಗತ್ಯವಿದೆ: ಉತ್ತರಾಖಂಡ್ ವಕ್ಫ್ ಮಂಡಳಿ ಅಧ್ಯಕ್ಷ

ಭಾರತಕ್ಕೆ ಮೋದಿಯವರ ಬಲವಾದ ನಾಯಕತ್ವದ ಅಗತ್ಯವಿದೆ: ಉತ್ತರಾಖಂಡ್ ವಕ್ಫ್ ಮಂಡಳಿ ಅಧ್ಯಕ್ಷ

ಉತ್ತರಾಖಂಡ್: ಗೊಂದಲ ಮತ್ತು ಕಲಹದ ವಾತಾವರಣವು ವಿವಿಧ ದೇಶಗಳನ್ನ ಆವರಿಸಿದೆ. ಇಂತಹ ಸಮಯದಲ್ಲಿ ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಬಲವಾದ ನಾಯಕತ್ವದ ಅಗತ್ಯವಿದೆ. ಅವರು ಮೂರನೇ ಅವಧಿಗೆ ಆಯ್ಕೆಯಾಗಬೇಕು. ಈ ಹಂತದಲ್ಲಿ ಅದರ ನಾಯಕತ್ವ ದುರ್ಬಲ ಕೈಗೆ ಹೋದರೆ ದೇಶವು ತೊಂದರೆ ಅನುಭವಿಸುತ್ತದೆ ಎಂದು ಉತ್ತರಾಖಂಡ್ ವಕ್ಫ್ ಮಂಡಳಿಯ ಅಧ್ಯಕ್ಷ ಶದಾಬ್ ಶಮ್ಸ್ ಹೇಳಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೋದಿ ಆಡಳಿತದಲ್ಲಿ ಅಭಿವೃದ್ಧಿಯ ಲಾಭಗಳು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪಿವೆ ಎಂದು ಅವರು ಹೇಳಿದರು. “ಈ ಹಿಂದೆ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನ ಪಡೆಯದ ಕೊನೆಯ ವ್ಯಕ್ತಿ ತನ್ನ ತಲೆಯ ಮೇಲೆ ಛಾವಣಿ ಮತ್ತು ಶೌಚಾಲಯವನ್ನ ಪಡೆಯುತ್ತಿದ್ದಾನೆ. ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ, ದೇಶವು ಪ್ರತಿಯೊಂದು ರಂಗದಲ್ಲೂ ಪ್ರಗತಿ ಸಾಧಿಸುತ್ತಿದೆ ಎಂದು ಅವರು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಮ್ಸ್, ಪ್ರತಿಪಕ್ಷಗಳು ಆರೋಪಿಸಿರುವಂತೆ ಮೋದಿ ನಾಯಕತ್ವದಲ್ಲಿ ಮುಸ್ಲಿಮರಾಗಲೀ ಅಥವಾ ಭಾರತದ ಸಂವಿಧಾನಕ್ಕಾಗಲೀ ಅಪಾಯವಿಲ್ಲ ಎಂದು ಹೇಳಿದರು.

Join Whatsapp
Exit mobile version