ಭಾರತ ಜಗತ್ತಿನ ಅತಿ ದೊಡ್ಡ ಶಸ್ತ್ರಾಸ್ತ್ರ ಆಮದು ದೇಶ

Prasthutha|

ನವದೆಹಲಿ: 2018- 2022ರ ನಡುವೆ ಭಾರತವು ನಿರಂತರವಾಗಿ ಜಾಗತಿಕವಾಗಿ ಅತಿ ದೊಡ್ಡ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶ ಎಂಬ ಸ್ಥಾನವನ್ನು ಪಡೆದುಕೊಂಡಿದೆ.

- Advertisement -


ರಷ್ಯಾದಿಂದ ಮೊದಲಿನಂತೆಯೇ ಭಾರತದ ಶಸ್ತ್ರಾಸ್ತ್ರ ಆಮದು ಅತಿ ಹೆಚ್ಚಿನದಾಗಿಯೇ ಇದೆ. ಒಟ್ಟು ಆಮದಿನಲ್ಲಿ ರಷ್ಯಾದ ಪಾಲು 64%ದಿಂದ 45%ಕ್ಕೆ ಇಳಿದಿದೆ.


ಕಳೆದ ಐದು ವರ್ಷಗಳಿಂದ ಭಾರತದ ಶಸ್ತ್ರಾಸ್ತ್ರ ಆಮದಿನಲ್ಲಿ ಫ್ರಾನ್ಸ್ ಎರಡನೇ ಸ್ಥಾನದ ರಫ್ತುದಾರ ಆಗಿದೆ. ಮೂರನೇ ಸ್ಥಾನಿ ಈಗ ಇಸ್ರೇಲ್.
ಸ್ವೀಡನ್’ನ ಎಸ್’ಐಪಿಆರ್’ಐ ಈ ಅಂಕಿ ಅಂಶಗಳನ್ನು ಹೊರಗಿಟ್ಟಿದೆ. ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವುದರಲ್ಲಿ ಜಾಗತಿಕವಾಗಿ ಎರಡನೇ ಸ್ಥಾನ ಸೌದಿ ಅರೇಬಿಯಾ ಇದೆ ಎಂದು ವರದಿ ತಿಳಿಸಿದೆ.



Join Whatsapp