Home ಟಾಪ್ ಸುದ್ದಿಗಳು ದೇಶವನ್ನು ಹೇಡಿಗಳು ಆಳುತ್ತಿದ್ದಾರೆ : TMC ಸಂಸದೆ ಮಹುವಾ ಮೊಯಿತ್ರಾ

ದೇಶವನ್ನು ಹೇಡಿಗಳು ಆಳುತ್ತಿದ್ದಾರೆ : TMC ಸಂಸದೆ ಮಹುವಾ ಮೊಯಿತ್ರಾ


ಹೊಸದಿಲ್ಲಿ : ಪತ್ರಕರ್ತರು ಮತ್ತು ಕಲಾವಿದರನ್ನು ಬಂಧನದಲ್ಲಿಡುವ ಹೇಡಿಗಳು ಭಾರತವನ್ನು ಆಳುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಾಹುವಾ ಮೊಯಿತ್ರಾ ಹೇಳಿದ್ದಾರೆ. ಲೋಕಸಭಾ ಭಾಷಣದಲ್ಲಿ ಮಹುವಾ ಮೊಯಿತ್ರಾ ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶವು ಅಘೋಷಿತ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಅಧಿಕಾರ ಮತ್ತು ಶಸ್ತ್ರಗಳು ಒಮ್ಮೆ ಕೈಗೆ ಸಿಕ್ಕಿದರೆ ಎಲ್ಲಾ ಹೇಡಿಗಳು ತಾನು ಧೈರ್ಯಶಾಲಿ ಎಂಬ ಭಾವನೆಯನ್ನು ಹೊಂದುತ್ತಾರೆ. ಆದರೆ ದೇಶವನ್ನು ಹೇಡಿಗಳು ಆಳುತ್ತಿದ್ದಾರೆ. ಮೋದಿ ಸರ್ಕಾರ ಪ್ರತಿಭಟನಾಕಾರರಿಗೆ ಹೆದರುತ್ತಿದೆ. ದೇಶದ ರಾಜಧಾನಿಯ ಗಡಿಗಳನ್ನು ಬ್ಯಾರಿಕೇಡ್‌ಗಳು ಮತ್ತು ಕಬ್ಬಿಣದ ಸರಳುಗಳಿಂದ ಮುಚ್ಚಲಾಗಿದೆ. ಅಂತರ್ಜಾಲವನ್ನು ರದ್ದುಪಡಿಸಿ ಕಟ್ಟುನಿಟ್ಟಾದ ನಿರ್ಬಂಧಗಳು ಜಾರಿಗೊಳಿಸಲಾಗಿದೆ. ನೆರೆಯ ರಾಷ್ಟ್ರಗಳಲ್ಲಿ ಕಿರುಕುಳಕ್ಕೊಳಗಾಗುತ್ತಿರುವ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರನ್ನು ರಕ್ಷಿಸುವ ಹೆಸರಿನಲ್ಲಿ ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಯನ್ನು ಜಾರಿಗೆ ತಂದಿದೆ. ಆದರೆ ತನ್ನದೇ ದೇಶದಲ್ಲಿ ಶೋಷಣೆಗೊಳಪಡುತ್ತಿರುವ ಅಲ್ಪಸಂಖ್ಯಾತರ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತಿಲ್ಲ ಎಂದು ಮಹುವಾ ಟೀಕಿಸಿದ್ದಾರೆ.

Join Whatsapp
Exit mobile version