Home ಕ್ರೀಡೆ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ದಾಖಲೆ ಬರೆದ ಭಾರತ

ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ದಾಖಲೆ ಬರೆದ ಭಾರತ

ನವದೆಹಲಿ: ಕ್ರಿಕೆಟ್ ಪ್ರೇಮಿಗಳಿಗೆ ಭರಪೂರ ಮನರಂಜನೆ ನೀಡಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯ ಗೆದ್ದು ಬೀಗಿದ್ದ ರೋಹಿತ್ ಪಡೆ ವಿಶ್ವದಾಖಲೆ ಬರೆದಿದೆ.

ಕ್ರಿಕೆಟ್ ಇತಿಹಾಸದಲ್ಲೇ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ದಾಖಲೆ ಇದೀಗ ಟೀಮ್ ಇಂಡಿಯಾ ಪಾಲಾಗಿದೆ. ಈ ಹಾದಿಯಲ್ಲಿ ಬ್ಲೂ ಬಾಯ್ಸ್ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿದೆ.
ಪ್ರಸಕ್ತ ವರ್ಷದಲ್ಲಿ ಭಾರತ ಇದುವರೆಗೂ 39 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇದರಲ್ಲಿ 24 ಟಿ20 ಪಂದ್ಯಗಳಲ್ಲಿನ ಗೆಲುವು ಸೇರಿದೆ. ಇದಕ್ಕೂ ಮೊದಲು 38 ಪಂದ್ಯಗಳನ್ನು ಗೆದ್ದ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. 2003ರಲ್ಲಿ ಸ್ಟೀವ್ ವಾ ನೇತೃತ್ವದಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನೊಂದಿಗೆ ದಾಖಲೆ ನಿರ್ಮಿಸಿತ್ತು.

2022ರ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳು ಸೇರಿದಂತೆ ಸತತ ಐದು ಸೋಲಿನೊಂದಿಗೆ ರೋಹಿತ್ ಶರ್ಮಾ ಬಳಗ ತನ್ನ ಪಯಣ ಆರಂಭಿಸಿತ್ತು. ಆ ಬಳಿಕ 2 ಟೆಸ್ಟ್, 13 ಏಕದಿನ ಹಾಗೂ 24 ಟಿ20 ಪಂದ್ಯಗಳಲ್ಲಿ ಭಾರತದ ಗೆಲುವಿನ ಪಯಣ ಮುಂದುವರಿದಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ, 2003ರಲ್ಲಿ ಆಡಿದ್ದ 38 ಏಕದಿನ ಪಂದ್ಯಗಳಲ್ಲಿ ವಿಶ್ವಕಪ್ ಟೂರ್ನಿಯ ಪಂದ್ಯಗಳು ಸೇರಿದಂತೆ 30 ಪಂದ್ಯಗಳಲ್ಲಿ ಸ್ಟೀವ್ ವಾ ಬಳಗ ಜಯಭೇರಿ ಬಾರಿಸಿತ್ತು. ಉಳಿದಂತೆ 8 ಟೆಸ್ಟ್ ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿತ್ತು.

ಕ್ಯಾಲೆಂಡರ್ ವರ್ಷದಲ್ಲಿ ಅತಿಹೆಚ್ಚು ಗೆಲುವು

39 – ಭಾರತ, 2022 (2 ಟೆಸ್ಟ್’ಗಳು, 13 ಏಕದಿನ, 24 ಟಿ20)
38 – ಆಸ್ಟ್ರೇಲಿಯಾ, 2003 (8 ಟೆಸ್ಟ್’ಗಳು, 30 ಏಕದಿನ)
2022 ಟೀಮ್ ಇಂಡಿಯಾದ ಇದುವರೆಗಿನ ಪಯಣ :
ಟೆಸ್ಟ್: ಒಟ್ಟು ಪಂದ್ಯ: 5, ಗೆಲುವು: 2, ಸೋಲು: 3
ಏಕದಿನ: ಒಟ್ಟು ಪಂದ್ಯ: 8, ಗೆಲುವು: 13, ಸೋಲು: 5
ಟಿ20ಐ: ಒಟ್ಟು ಪಂದ್ಯ :32, ಗೆಲುವು: 24, ಸೋಲು: 8

Join Whatsapp
Exit mobile version