Home ಟಾಪ್ ಸುದ್ದಿಗಳು ಮುಸ್ಲಿಮ್ ತಾಯಿಯಂದಿರಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ಲಭ್ಯ: ಕೆ.ಅಶ್ರಫ್

ಮುಸ್ಲಿಮ್ ತಾಯಿಯಂದಿರಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ಲಭ್ಯ: ಕೆ.ಅಶ್ರಫ್

ಮಂಗಳೂರು: ಇತ್ತೀಚೆಗೆ ಜಿಲ್ಲೆಯ ಪೂಂಜಾ, ಭಟ್ಟ, ಮುತಾಲಿಕಾದಿಯರಾಗಿ ಸಂಘ ಮಿತ್ರರು,ಮುಸ್ಲಿಮ್ ಸಮುದಾಯದ ತಾಯಿ, ಮಹಿಳೆಯರ ಬಗ್ಗೆ ವಿವಾದಾತ್ಮಕವಾಗಿ ನಾಲಗೆ ಹರಿ ಬಿಡುವ ಚಾಳಿ ಇದ್ದು, ಹತ್ತೊಂಬತ್ತನೇ ಶತಮಾನದ ಆರಂಭದ ಮುಸ್ಲಿಮ್ ತಾಯಿಯಂದಿರನ್ನು ಅವರು ಹುಟ್ಟಿಸಿದ ಧೀರ ಮಕ್ಕಳ ಕಾರಣಕ್ಕಾಗಿ ಅವರನ್ನು ಸ್ಮರಿಸಲೇ ಬೇಕಿದೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಹೇಳಿದ್ದಾರೆ.


ಈ ಬಗ್ಗೆ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ಅವರು, ದೆಹಲಿಯ ಇಂಡಿಯಾ ಗೇಟ್ ನ ವೀರಕಂಬದಲ್ಲಿ ಇಂದು ಸ್ವಾತಂತ್ರ್ಯ ವೀರರ ಅಧಿಕ ನಾಮಗಳು ಅಂದಿನ ಮುಸ್ಲಿಮ್ ತಾಯಿಯಂದಿರು ಹುಟ್ಟಿಸಿದ ಮಕ್ಕಳದ್ದು ಆಗಿದೆ. ಇಂದು ಮುಸ್ಲಿಮ್ ತಾಯಿ ಮಹಿಳೆಯರ ಬಗ್ಗೆ ಕೇವಲವಾಗಿ ಅರಚುವ ಮತ್ತು ಮುಸ್ಲಿಮ್ ಜನಸಂಖ್ಯೆಯ ಬಗ್ಗೆ ಮುಸ್ಲಿಮೇತರರಲ್ಲಿ ಗೊಂದಲ ಸೃಷ್ಟಿಸುವ ಪೂಂಜಾ, ಭಟ್ಟಾದಿಗಳು ಒಂದು ಸಲ ಇಂಡಿಯಾ ಗೇಟ್ ಗೆ ಭೇಟಿ ನೀಡಿ ಮುಸ್ಲಿಮ್ ತಾಯಿ ಮಹಿಳೆಯರ ಮಕ್ಕಳ ಹೆಸರನ್ನು ವೀಕ್ಷಿಸಲಿ ಮತ್ತು ಅವರ ತಾಯಿಯಂದಿರನ್ನು ಸ್ಮರಿಸಲಿ. ಈ ದೇಶದ ಸ್ವಾತಂತ್ರ್ಯ ಕದನಕ್ಕಾಗಿಯೆ ಮಕ್ಕಳನ್ನು ಹುಟ್ಟಿಸಿದ ತಾಯಿಯಂದಿರು ಯಾವ ಧರ್ಮದವರಿದ್ದರೂ ಅವರನ್ನು ಸ್ಮರಿಸುವ ಕನಿಷ್ಠ ಸೌಜನ್ಯ ವನ್ನಾದರೂ ಪೂಂಜಾ, ಭಟ್ಟಾದಿಗಳು ಸಲ್ಲಿಸಿ ಈ ದೇಶಕ್ಕೆ ಧನ್ಯವಾಗಿರಲಿ. ಮುಸ್ಲಿಮ್ ಜನಸಂಖ್ಯೆಯ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಇವರು ತಿಳಿಯಲಿ, ಈ ದೇಶದಲ್ಲಿ ಮುಸ್ಲಿಮರಿಗೆ ಹುಟ್ಟುವ ಪ್ರತೀ ದ್ವಿತೀಯ ಮಗುವನ್ನು ಭಾರತ ದೇಶದ ರಕ್ಷಣೆಗಾಗಿ ಮೀಸಲಿರಿಸಲಿದ್ದೇವೆ. ಅದಕ್ಕಿಂತ ಅಧಿಕ ಮಕ್ಕಳು ಹುಟ್ಟಿದರೆ ಈ ದೇಶವನ್ನು ರಕ್ಷಿಸಲು ಗಡಿಯಲ್ಲಿ ಅವರನ್ನು ಅರ್ಪಿಸಿ ಬರಲು ಮುಸ್ಲಿಮ್ ಸಮುದಾಯ ಸಿದ್ಧವಿದೆ ಎಂದರು.

Join Whatsapp
Exit mobile version