Home ಟಾಪ್ ಸುದ್ದಿಗಳು ಚೆನ್ನೈ ಟೆಸ್ಟ್ | ಭಾರತಕ್ಕೆ ಇಂಗ್ಲೆಂಡ್ ವಿರುದ್ಧ ಭಾರೀ ಅಂತರದ ಸೋಲು

ಚೆನ್ನೈ ಟೆಸ್ಟ್ | ಭಾರತಕ್ಕೆ ಇಂಗ್ಲೆಂಡ್ ವಿರುದ್ಧ ಭಾರೀ ಅಂತರದ ಸೋಲು

ಚೆನ್ನೈ : ಇಲ್ಲಿನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯಾಟದಲ್ಲಿ ಭಾರತ ವಿರುದ್ಧ ಇಂಗ್ಲೆಂಡ್ 227 ರನ್ ಗಳ ಭಾರೀ ಅಂತರದ ವಿಜಯ ದಾಖಲಿಸಿದೆ.

ಇಂಗ್ಲೆಂಡ್ 420 ರನ್ ಗಳ ಗೆಲುವಿನ ಗುರಿ ಇರಿಸಿತ್ತು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಶುಭಮಾನ್ ಗಿಲ್ ಜೋಡಿಯ ಪ್ರತಿ ಹೋರಾಟದ ನಡುವೆಯೂ ಪ್ರವಾಸಿ ಇಂಗ್ಲೆಂಡ್ ಬೌಲಿಂಗ್ ಬಲೆಗೆ ಬಿದ್ದ ಭಾರತ ತಂಡ 227 ರನ್ ಗಳಿಂದ ಸೋಲುವುದು ಅನಿವಾರ್ಯವಾಗಿತು.

ಕೊಹ್ಲಿ 104 ಎಸೆತಗಳಲ್ಲಿ 72 ರನ್ ಗಳಿಸಿದ್ದರು ಮತ್ತು ಗುಲ್ 83 ಎಸೆತಗಳಲ್ಲಿ 50 ರನ್ ಗಳಿಸಿದ್ದರು. 420 ರನ್ ಗಳ ಗುರಿ ಹೊಂದಿದ್ದ ಭಾರತ ಮಂಗಳವಾರ ದಿನದ ಆಟ ಆರಂಭಿಸಿದ ಬಳಿಕ, 58.1 ಓವರ್ ಗಳಲ್ಲಿ 192 ರನ್ ಗೆ ಸರ್ವಪತನಗೊಂಡಿತು.   

Join Whatsapp
Exit mobile version