Home ಟಾಪ್ ಸುದ್ದಿಗಳು ಜಾಗತಿಕ ಹಸಿವು ಸೂಚ್ಯಂಕದಲ್ಲಿ 101ರಿಂದ 107ಕ್ಕೆ ಕುಸಿದ ಭಾರತ

ಜಾಗತಿಕ ಹಸಿವು ಸೂಚ್ಯಂಕದಲ್ಲಿ 101ರಿಂದ 107ಕ್ಕೆ ಕುಸಿದ ಭಾರತ

ನವದೆಹಲಿ: ಜಾಗತಿಕ ಹಸಿವು ಸೂಚ್ಯಂಕ (ಜಿಎಚ್ ಐ) 2021 ರಲ್ಲಿ 101 ನೇ ಸ್ಥಾನದಲ್ಲಿದ್ದ ಭಾರತವು 2022 ರಲ್ಲಿ 107 ನೇ ಸ್ಥಾನಕ್ಕೆ ಕುಸಿದಿದೆ.

ಐರಿಶ್ ನೆರವಿನ ಸಂಸ್ಥೆ ಕನ್ಸರ್ನ್ ವರ್ಲ್ಡ್ ವೈಡ್ ಮತ್ತು ಜರ್ಮನಿಯ  ವೆಲ್ಟ್ ಹಂಗರ್ ಹಿಲ್ಫೆ ಸಂಸ್ಥೆ ಜಂಟಿಯಾಗಿ ತಯಾರಿಸಿದ ವರದಿಯಂತೆ ಜಿಎಚ್ಐನಲ್ಲಿ 121 ದೇಶಗಳ ಪೈಕಿ, ಭಾರತವು ತನ್ನ ನೆರೆಯ ರಾಷ್ಟ್ರಗಳಾದ ನೇಪಾಳ (81), ಪಾಕಿಸ್ತಾನ (99), ಶ್ರೀಲಂಕಾ (64) ಮತ್ತು ಬಾಂಗ್ಲಾದೇಶ (84) ನಂತರದ ಸ್ಥಾನದಲ್ಲಿದೆ.

ಜಿಎಚ್ಐ ಭಾರತಕ್ಕೆ 29.1 ಅಂಕಗಳನ್ನು ನೀಡಿದ್ದು, ಇದು ಭಾರತದಲ್ಲಿ ಹಸಿವಿನ ಮಟ್ಟ  ‘ಆತಂಕಕಾರಿ’ ಎಂದು ಬಣ್ಣಿಸಲಾಗಿದೆ.

121ನೇ ಸ್ಥಾನದಲ್ಲಿರುವ ಯೆಮೆನ್ ಈ ಪಟ್ಟಿಯಲ್ಲಿ 17 ಸಾಮೂಹಿಕ ಅಗ್ರಶ್ರೇಯಾಂಕದ ರಾಷ್ಟ್ರಗಳಿವೆ. ಚೀನಾ ಮತ್ತು ಕುವೈತ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಏಷ್ಯಾದ ರಾಷ್ಟ್ರಗಳಾಗಿವೆ, ಇದು ಕ್ರೊವೇಷಿಯಾ, ಎಸ್ಟೋನಿಯಾ ಮತ್ತು ಮಾಂಟೆನೆಗ್ರೋ ಸೇರಿದಂತೆ ಯುರೋಪಿಯನ್ ರಾಷ್ಟ್ರಗಳಿಂದ ಪ್ರಾಬಲ್ಯ ಹೊಂದಿದೆ.

ಕಳೆದ ವರ್ಷ 116 ರಾಷ್ಟ್ರಗಳ ಪೈಕಿಯಲ್ಲಿ 101ನೇ ಸ್ಥಾನದಲ್ಲಿತ್ತು. ಇದೀಗ 107 ಸ್ಥಾನಕ್ಕೆ ಕುಸಿದಿದೆ.  ಭಾರತದ ಜಾಗತಿಕ ಹಸಿವು ಸೂಚ್ಯಂಕ ಸ್ಕೋರ್ 2012 ಮತ್ತು 2021 ರ ನಡುವೆ ಶೇ 28.5 ರಿಂದ ಶೇ. 27. 5ಕ್ಕೆ ಕುಸಿದಿದೆ.

ಮೋದಿಯವರು ಪ್ರಧಾನಿಯಾದ  ಎಂಟು ವರುಷಗಳಿಂದಲೂ  ಭಾರತದ  ಹಸಿವಿನ ಮಟ್ಟ  ಗಂಭೀರವಾಗಿ ಕೆಳಮಟ್ಟಕ್ಕೆ  ಕುಸಿಯುತ್ತಿದೆ ಎಂದು ಕಾಂಗ್ರೆಸ್ ಸಂಸದ ಪಿ. ಚಿದಂಬರಂ ಆಕ್ರೋಶ ವ್ಯಕ್ತಪಡಿಸಿದ್ದರು.

“ದೇಶದ ನಿಜವಾದ ಸಮಸ್ಯೆಗಳಾದ ಅಪೌಷ್ಟಿಕತೆ, ಹಸಿವು, ಮಕ್ಕಳ ವಯೋ ಕುಂದು ಬೆಳವಣಿಗೆ ಮತ್ತು ಪೀಚಲುತನದ ಬಗ್ಗೆ ಮೋದಿಯವರು ಯಾವಾಗ ಗಮನ ಹರಿಸುತ್ತಾರೆ?” ಎಂದು ಚಿದಂಬರಂ ಟ್ವೀಟಿನಲ್ಲಿ ಕೇಳಿದ್ದರು.

ಈ ವರದಿ ತಯಾರಿಸಿದ ಐರಿಶ್ ಸಹಾಯ ನಿಧಿ ಮತ್ತು ಜರ್ಮನಿಯ ವೆಲ್ಟ್ ಹಂಗರ್ ಹಿಲ್ಫ್ ಸಂಸ್ಥೆಗಳು ಭಾರತದ ಸ್ಥಿತಿ ಗಂಭೀರ ಎಂದು ಹೇಳಿವೆ.

2021ರಲ್ಲಿ ಭಾರತವು ಮೊದಲ ಬಾರಿಗೆ 100ಕ್ಕಿಂತ ಕೆಳಗೆ ಜಾರಿದಾಗ ಅದನ್ನು ಆಘಾತಕಾರಿ ಎಂದು ಕರೆಯಲಾಗಿದ್ದು, ಆ ಕುರಿತು  ಬಿಜೆಪಿ ಸರಕಾರವು ವೈಜ್ಞಾನಿಕವಾಗಿ ಸರಿಯಾಗಿ ಲೆಕ್ಕ ಹಾಕಿಲ್ಲ ಎಂದು ಆರೋಪಿಸಿತ್ತು.

“ವಿಶ್ವ ಸಂಸ್ಥೆಯ ಎಫ್ಎಓ- ಆಹಾರ ಮತ್ತು ಕೃಷಿ ಸಂಸ್ಥೆಯ ಅಪೌಷ್ಟಿಕತೆಯ ಮಾನಕದ ಹೋಲಿಕೆ ಅಂದಾಜು ಆಧರಿಸಿ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು ಕೆಳಗಿದೆ ಎಂದು ಹೇಳಿರುವುದು ಆಘಾತಕಾರಿ. ಇದು ಲೆಕ್ಕ ಹಾಕಿದ ವಿಧಾನದ ತಪ್ಪು. ವರದಿಯನ್ನು ಬಿಡುಗಡೆ ಮಾಡುವುದಕ್ಕೆ ಮೊದಲು ಐರಿಸ್ ಏಡ್ ಕನ್ಸರ್ನ್ ವರ್ಲ್ಡ್ ವೈಡ್ ಮತ್ತು ವೆಲ್ಟ್ ಹಂಗರ್ ಹಿಲ್ಫ್ ಗಳು ಸರಿಯಾದ ಕ್ರಮವನ್ನು ಅನುಸರಿಸಿಲ್ಲ” ಎಂದು ಬಿಜೆಪಿ ಸರಕಾರವು ಹೇಳಿತ್ತು.

“ಎಫ್ಎಓ ಉಪಯೋಗಿಸಿದ ಕ್ರಮವು ಅವೈಜ್ಞಾನಿಕ. ಅವರು ಫೋನ್ ಮೂಲಕ ನಾಲ್ಕು ಪ್ರಶ್ನೆಗಳ ಆಧಾರದಲ್ಲಿ ಉತ್ತರ ಪಡೆದು ಅಂತ್ಯಗೊಳಿಸುತ್ತಾರೆ. ಈ ಅವಧಿಯಲ್ಲಿ ಲಭ್ಯವಿರುವ ಆಹಾರ ವಸ್ತುಗಳು ಮತ್ತು ಅಪೌಷ್ಟಿಕತೆಯ ವೈಜ್ಞಾನಿಕ ಲೆಕ್ಕಾಚಾರ ಸಿಗುವುದಿಲ್ಲ. ಫೋನು ಮೂಲಕ ಅಪೌಷ್ಟಿಕತೆಯ ಪೀಚಲುತನ, ಕಡಿಮೆ ತೂಕ ಎಲ್ಲ ತಿಳಿಯುವುದು ಸಾಧ್ಯವಿಲ್ಲ” ಎಂದು ಸರಕಾರ ಹಾರಿಕೆಯ ಉತ್ತರ ನೀಡಿತ್ತು.

ಇದು ಸಹಜವಾಗಿ ನಡೆಸುವ ಅಭಿಪ್ರಾಯ ಸಂಗ್ರಹದ ಮೂಲಕ ನಡೆಯುತ್ತದೆ. ದಿಲ್ಲಿಯ ಉತ್ತರವು ಸಮಸ್ಯೆ ಬಗೆಹರಿಸುವಂತೆ ಇಲ್ಲ ಎಂದು ವೆಲ್ಟ್ ಹಂಗರ್ ಹಿಲ್ಫ್ ತಿಳಿಸಿತ್ತು.

ವಿಶ್ವ ಸಂಸ್ಥೆಗೆ ಸರಕಾರವೇ ಒದಗಿಸುವ ಅಂಕಿ ಅಂಶವನ್ನೂ ಲೆಕ್ಕಾಚಾರದಲ್ಲಿ ಪರಿಗಣಿಸಲಾಗುತ್ತದೆ ಎಂದೂ ಡಬ್ಲ್ಯುಎಚ್ಎಚ್ ತಿಳಿಸಿತ್ತು.

“ಭಾರತ ಸಹಿತ ವಿಶ್ವ ಸಂಸ್ಥೆಯ ಎಲ್ಲ ಸದಸ್ಯ ದೇಶಗಳು ಎಫ್ಎಓಗೆ ಹಸಿವು, ಅಪೌಷ್ಟಿಕತೆ ಇತ್ಯಾದಿ ಸಂಬಂಧಿತ ಮಾಹಿತಿಯನ್ನು ಸಲ್ಲಿಸುತ್ತವೆ. ಫೋನ್ ಸಮೀಕ್ಷೆಯ ಜೊತೆಗೆ ಸರಕಾರಗಳು ಸಲ್ಲಿಸುವ ಮಾಹಿತಿಗಳನ್ನು ನಿಗಾ ಇಟ್ಟು ವಿಶ್ಲೇಷಿಸಿ ಹಸಿವು ಸೂಚ್ಯಂಕ ತಯಾರಿಸಲಾಗುತ್ತದೆ” ಎಂದು ಜಾಗತಿಕ ಹಸಿವು ಸೂಚ್ಯಂಕದ ಸಲಹೆಗಾತಿ ಮಿರಿಯಂ ವೈಮೆರ್ ತಿಳಿಸಿದ್ದಾರೆ.

ಸೂಕ್ತ ಪೌಷ್ಟಿಕ ಆಹಾರದ ಕೊರತೆ, ಮಕ್ಕಳು ವಯಸ್ಸಿಗೆ ತಕ್ಕ ಬೆಳವಣಿಗೆ ಕಾಣದೆ ಕಡಿಮೆ ತೂಕ ಮತ್ತು ಪೀಚಲು ಆಗಿರುವುದು, ಐದು ವರುಷದ ಮಕ್ಕಳು ಇರಬೇಕಾದ ತೂಕ ಮತ್ತು ಎತ್ತರ ಇರದಿರುವ ಅಪೌಷ್ಟಿಕತೆ ಸಮಸ್ಯೆ, ಐದು ವರುಷದೊಳಗೆ ಆಗುವ ಶಿಶು ಮರಣದ ಪ್ರಮಾಣ ಈ ನಾಲ್ಕನ್ನು ಪ್ರಮುಖವಾಗಿ ಗಮನಿಸಿ ಜಾಗತಿಕ ಹಸಿವಿನ ಸೂಚ್ಯಂಕ ಗುರುತಿಸಲಾಗುತ್ತದೆ.

Join Whatsapp
Exit mobile version