Home ಟಾಪ್ ಸುದ್ದಿಗಳು ವಿಶ್ವದ ದುಬಾರಿ ನಗರಗಳ ಪಟ್ಟಿಯಿಂದ ಹೊರಗುಳಿದ ಭಾರತ; ಇಸಿಎ ಇಂಟರ್‌ನ್ಯಾಶ‌ನಲ್‌ ವರದಿ

ವಿಶ್ವದ ದುಬಾರಿ ನಗರಗಳ ಪಟ್ಟಿಯಿಂದ ಹೊರಗುಳಿದ ಭಾರತ; ಇಸಿಎ ಇಂಟರ್‌ನ್ಯಾಶ‌ನಲ್‌ ವರದಿ

ಹೊಸದಿಲ್ಲಿ: ವಿಶ್ವದ ದುಬಾರಿ ನಗರಗಳ ಬಗ್ಗೆ ಇಸಿಎ ಇಂಟರ್‌ನ್ಯಾಶ‌ನಲ್‌ ಹೆಸರಿನ ಸಂಸ್ಥೆ ಸಮೀಕ್ಷೆ ನಡೆಸಿದ್ದು,  ತೈಲ ಬೆಲೆಯೇರಿಕೆ, ಹಣದುಬ್ಬರ, ಮನೆ ಬಾಡಿಗೆ ಮುಂತಾದ ಮಾನ ದಂಡಗಳನ್ನಿಟ್ಟುಕೊಂಡು ಸಮೀಕ್ಷೆ ನಡೆಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.

ಹಾಂಕಾಂಗ್‌ ಜಗತ್ತಿನ ಅತ್ಯಂತ ದುಬಾರಿ ನಗರವಾಗಿದ್ದು, ನಂತರದ 4 ಸ್ಥಾನಗಳನ್ನು ಕ್ರಮವಾಗಿ ನ್ಯೂಯಾರ್ಕ್‌, ಜಿನಿವಾ, ಲಂಡನ್‌ ಮತ್ತು ಟೋಕಿಯೊ ತಮ್ಮದಾಗಿಸಿಕೊಂಡಿವೆ. ನ್ಯೂಯಾರ್ಕ್‌ ಮತ್ತು ಜಿನಿವಾದಲ್ಲಿ ಕಳೆದ ಒಂದು ವರ್ಷದಲ್ಲಿ ಮನೆ ಬಾಡಿಗೆ ದರವು ಕ್ರಮವಾಗಿ ಶೇ.20 ಮತ್ತು ಶೇ.12 ಹೆಚ್ಚಿದ್ದರಿಂದಾಗಿ ಈ ಎರಡೂ ನಗರಗಳು ಟಾಪ್‌ 5ರ ಸ್ಥಾನಕ್ಕೇರಿವೆ. ಆದರೆ ಭಾರತದ ಯಾವುದೇ ನಗರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.

ವಿಶ್ವಾದ್ಯಂತ ಕಳೆದ 1 ವರ್ಷದಲ್ಲಿ ಪೆಟ್ರೋಲ್‌ ದರ ಸರಾಸರಿ ಶೇ.37 ಏರಿಕೆ ಕಂಡಿದೆ. ಬೀರತ್‌ ನಗರದಲ್ಲಂತೂ ಶೇ.1128 ಏರಿಕೆ ಯಾಗಿದೆ. ದುಬಾರಿ ನಗರ ಹಾಂಕಾಂಗ್‌ನಲ್ಲಿ ಒಂದು   ಲೀಟರ್‌ ಪೆಟ್ರೋಲ್‌ ಬೆಲೆ 236 ರೂ., 1 ಕೆಜಿ ಟೊಮೆಟೊ ಬೆಲೆ ರೂ 894 ಎನ್ನಲಾಗಿದೆ.ಇಂಧನಕ್ಕೆ ಅತ್ಯಂತ ಕಡಿಮೆ ಬೆಲೆ ಇರುವುದು ಟೆಹ್ರಾನ್‌ ನಲ್ಲಿ. ಅಲ್ಲಿ 1 ಲೀ. ಇಂಧನ ಬೆಲೆ 7 ರೂ. ಆಗಿದೆ. ಟರ್ಕಿಯ ಅಂಕಾರಾ ಕೊನೆಯ ಸ್ಥಾನದಲ್ಲಿದ್ದು ಇದು ಅತ್ಯಂತ ಅಗ್ಗದ ನಗರವಾಗಿದೆ.

Join Whatsapp
Exit mobile version