Home ಟಾಪ್ ಸುದ್ದಿಗಳು ಭಾರತದ ಜೈಲಿನಲ್ಲಿರುವ ಮುಸ್ಲಿಮರೆಷ್ಟು ? NCRBಯ ಆತಂಕಕಾರಿ ಅಂಕಿ ಅಂಶಗಳು ಬಹಿರಂಗ

ಭಾರತದ ಜೈಲಿನಲ್ಲಿರುವ ಮುಸ್ಲಿಮರೆಷ್ಟು ? NCRBಯ ಆತಂಕಕಾರಿ ಅಂಕಿ ಅಂಶಗಳು ಬಹಿರಂಗ

ನವದೆಹಲಿ: 2020 ರಲ್ಲಿ ರಾಷ್ಟ್ರೀಯ ಅಪರಾಧ ವರದಿ ಬ್ಯೂರೋ (NCRB) ಬಿಡುಗಡೆಗೊಳಿಸಿದ ವರದಿಯಲ್ಲಿ ಭಾರತದ ಕೈದಿಗಳ ಪೈಕಿ ಅಸ್ಸಾಮ್ ನಲ್ಲಿ ಅತೀ ಹೆಚ್ಚು ಮುಸ್ಲಿಮ್ ಅಪರಾಧಿ ಮತ್ತು ವಿಚಾರಣಾಧೀನ ಕೈದಿಗಳು ಜೈಲಿನಲ್ಲಿ ಕ್ರಮವಾಗಿ ಶೇಕಡಾ 47 ಮತ್ತು ಶೇಕಡಾ 52.3 ಇದ್ದಾರೆ ಎಂದು ಬಹಿರಂಗಪಡಿಸಿದೆ.

ಅಸ್ಸಾಮ್ ಒಟ್ಟು ಮುಸ್ಲಿಮ್ ಜನಸಂಖ್ಯೆ ಶೇಕಡಾ 34 ರಷ್ಟಿದ್ದು, ಆ ಪೈಕಿ ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಮರು ಜೈಲಿನಲ್ಲಿದ್ದಾರೆ ಎಂಬ ಆಘಾತಕಾರಿ ಅಂಶವನ್ನು NCRB ವರದಿಯಲ್ಲಿ ಉಲ್ಲೇಖಿಸಿದೆ.

NCRB ವರದಿಯು ಪಶ್ಚಿಮ ಬಂಗಾಳ ಮುಸ್ಲಿಮ್ ಅಪರಾಧಿಗಳನ್ನು ಮತ್ತು ವಿಚಾರಣಾಧೀನ ಕೈದಿಗಳನ್ನು ಜೈಲಿನಲ್ಲಿರಿಸುವ ಎರಡನೇ ಸ್ಥಾನದಲ್ಲಿದೆ ಎಂದು ತೋರಿಸಿದೆ. ಅದು ಕ್ರಮವಾಗಿ ಶೇಕಡಾ 33 ಮತ್ತು 43.5 ರಷ್ಟಿದೆ. ಪಶ್ಚಿಮ ಬಂಗಾಳದಲ್ಲಿ ಕೈದಿಗಳ ಶೇಕಡಾವಾರು ಪ್ರಮಾಣ ಹೆಚ್ಚು ಅಸಮಾನವಾಗಿದೆ. ಇಲ್ಲಿ ಶೇಕಡಾ 30 ರಷ್ಟು ಮಂದಿ ಮುಸ್ಲಿಮರಾಗಿದ್ದಾರೆ ಎಂಬುದು ವರದಿಯಿಂದ ಬಹಿರಂಗಗೊಂಡಿದೆ.

ಈ ಮಧ್ಯೆ ಜೈಲಿನಲ್ಲಿರುವ ಕೈದಿಗಳ ರಾಜ್ಯವಾರು ವಿಂಗಡಿಸುವುದಾದರೆ, ಹರ್ಯಾಣ ಶೇಕಡಾ 100, ಜಮ್ಮು ಮತ್ತು ಕಾಶ್ಮೀರ 96.4, ತೆಲಂಗಾಣ 49.5 ಮಂದಿ ಮುಸ್ಲಿಮರು ಜೈಲಿನಲ್ಲಿದ್ದಾರೆ. 27 ಡಿಸೆಂಬರ್ 2021 ರಂದು ಭಾರತದ ಕೈದಿಗಳ ‘ಪ್ರಿಸನ್ ಸ್ಟ್ಯಾಟಿಕ್ಸ್ ಇಂಡಿಯಾ’ (PSI) ಎಂಬ ವರದಿಯನ್ನು NCRB ಬಿಡುಗಡೆ ಮಾಡಿದೆ.

ಇಂಡಿಯನ್ ಸಿವಿಲ್ ಲಿಬರ್ಟೀಸ್ ಯೂನಿಯನ್ (ಐ.ಸಿ.ಎಲ್.ಯು) ನಡೆಸುತ್ತಿರುವ ಸುಪ್ರೀಮ್ ಕೋರ್ಟ್ ವಕೀಲ ಅನಸ್ ತನ್ವಿರ್, ದೇಶದ ರಾಜಕೀಯ ಸನ್ನಿವೇಶಕ್ಕೂ ಇದಕ್ಕೂ ಸಾಕಷ್ಟು ಸಂಬಂಧ ಹೊಂದಿದೆ ಎಂದು ಭಾವಿಸಲಾಗಿದೆ.

ಮಾತ್ರವಲ್ಲದೆ ಬಡತನ, ಪೊಲೀಸರ ಪೂರ್ವಾಗ್ರಹಪೀಡಿತ ನಿಲುವು ಮತ್ತು ಸರ್ಕಾರಿ ಯಂತ್ರದ ಪಕ್ಷಪಾತ ಧೋರಣೆ ಇದಕ್ಕೆ ಪ್ರಮುಖ ಕಾರಣವಾಗಿವೆ ಎಂದು ತನ್ವೀರ್ ತಿಳಿಸಿದರು.

ಅಸ್ಸಾಂ ಮತ್ತು ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ, ಕೇರಳ (32%), ತೆಲಂಗಾಣ (23.5%), ಗುಜರಾತ್ (19.5%), ದೆಹಲಿ (21%), ಹರಿಯಾಣ (16.7%) ಕೆಲವು ರಾಜ್ಯಗಳಲ್ಲಿ ಹೆಚ್ಚಿನ ಶೇಕಡಾವಾರು ಮುಸ್ಲಿಂ ಅಪರಾಧಿಗಳು ಜೈಲಿನಲ್ಲಿದ್ದಾರೆ.
ಉತ್ತರಾಖಂಡ (30%), ಉತ್ತರ ಪ್ರದೇಶ (28.3%), ಕೇರಳ (27.5%), ದೆಹಲಿ (26.8%), ತೆಲಂಗಾಣ (26%), ಕರ್ನಾಟಕ (23.4%), ತ್ರಿಪುರ (21.8%), ಮತ್ತು ಗುಜರಾತ್ (18.2%) ಮುಸ್ಲಿಂ ವಿಚಾರಣಾಧೀನ ಕೈದಿಗಳ ಹೆಚ್ಚಿನ ಶೇಕಡಾವಾರು ಪ್ರಮಾಣವನ್ನು ಹೊಂದಿರುವ ಕೆಲವು ರಾಜ್ಯಗಳಾಗಿವೆ.

ಒಟ್ಟಾರೆಯಾಗಿ, ಅಪರಾಧಿಗಳು (17.4%), ವಿಚಾರಣಾಧೀನ ಕೈದಿಗಳು (19.5%), ಬಂಧಿತರು (30.7%) ಮತ್ತು ಇತರ ಕೈದಿಗಳು (57.2%) ದೇಶದ ವಿವಿಧ ಜೈಲುಗಳಲ್ಲಿ ಜೀವನ ಸವೆಸುತ್ತಿದ್ದಾರೆ ಎಂಬುದು ಕಟು ವಾಸ್ತವ.

ಹಿರಿಯ ವಕೀಲರಾದ ಅಬ್ದುಲ್ ವಾಹಿದ್, ಇದೇ ಅಧ್ಯಯನವನ್ನು ಸೂಚಿಸುವ ಪೊಲೀಸ್ ಮತ್ತು ರಾಜ್ಯ ಸರ್ಕಾರದ ಪೂರ್ವಾಗ್ರಹ ಪೀಡಿತ ನಿಲುವಿಗೆ ತನ್ವೀರ್ ಅವರೊಂದಿಗೆ ಧ್ವನಿಗೂಡಿಸಿದರು.

ಇನ್ನು ಅಪರಾಧಿಗಳ ಪಟ್ಟಿಯ ಕಡೆಗೆ ಗಮನ ಹರಿಸುವುದಾದರೆ ಅಸ್ಸಾಂ – 2770 ಪೈಕಿ 1313 ಮುಸ್ಲಿಮರು,
ಪಶ್ಚಿಮ ಬಂಗಾಳ – 5367 ರಲ್ಲಿ 33 % (1794) ಅಪರಾಧಿಗಳು ಜೈಲಿನಲ್ಲಿರುವ ಮುಸ್ಲಿಮರು.
ಕೇರಳ – ಒಟ್ಟು 2426 ಅಪರಾಧಿಗಳಲ್ಲಿ, 32 % (792) ಅಪರಾಧಿಗಳು ಜೈಲಿನಲ್ಲಿರುವ ಮುಸ್ಲಿಮರು.
ಹರಿಯಾಣ – ಒಟ್ಟು 3338 ರಲ್ಲಿ, 16.7 % (558) ಅಪರಾಧಿಗಳು ಜೈಲಿನಲ್ಲಿರುವ ಮುಸ್ಲಿಮರು.
ತಮಿಳುನಾಡು – ಒಟ್ಟು 4161 ರಲ್ಲಿ 13% (559) ಅಪರಾಧಿಗಳು ಜೈಲಿನಲ್ಲಿರುವ ಮುಸ್ಲಿಮರು.
ಉತ್ತರ ಪ್ರದೇಶ – ಒಟ್ಟು 26734 ರಲ್ಲಿ, 20% (5411) ಅಪರಾಧಿಗಳು ಜೈಲಿನಲ್ಲಿರುವ ಮುಸ್ಲಿಮರು.
ಗುಜರಾತ್ – ಒಟ್ಟು 3853 ರಲ್ಲಿ 19.5% (755) ಅಪರಾಧಿಗಳು ಜೈಲಿನಲ್ಲಿರುವ ಮುಸ್ಲಿಮರು.
ತೆಲಂಗಾಣ – 1910 ರಲ್ಲಿ, 23.5 % (450) ಅಪರಾಧಿಗಳು ಜೈಲಿನಲ್ಲಿರುವ ಮುಸ್ಲಿಮರು.
ದೆಹಲಿ – 1470 ರಲ್ಲಿ, 21 % (316) ಅಪರಾಧಿಗಳು ಜೈಲಿನಲ್ಲಿರುವ ಮುಸ್ಲಿಮರು.

ವಿಚಾರಣಾಧೀನ ಕೈದಿಗಳ ಅಂಕಿಅಂಶಗಳು ಇಂತಿವೆ
6495 ರಲ್ಲಿ, 52.3% (3403) ವಿಚಾರಣಾಧೀನ ಕೈದಿಗಳು ಅಸ್ಸಾಂನ ಜೈಲಿನಲ್ಲಿರುವ ಮುಸ್ಲಿಮರು.
10195 ರಲ್ಲಿ, 18.2 % (1860) ವಿಚಾರಣಾಧೀನ ಕೈದಿಗಳು ಗುಜರಾತ್‌ನ ಜೈಲಿನಲ್ಲಿರುವ ಮುಸ್ಲಿಮರು.
14951 ರಲ್ಲಿ, 14 % (2096) ವಿಚಾರಣಾಧೀನ ಕೈದಿಗಳು ಹರಿಯಾಣದ ಜೈಲಿನಲ್ಲಿರುವ ಮುಸ್ಲಿಮರು.
17103 ರಲ್ಲಿ, 19 % (3267), ವಿಚಾರಣಾಧೀನ ಕೈದಿಗಳು ಜಾರ್ಖಂಡ್‌ನ ಜೈಲಿನಲ್ಲಿರುವ ಮುಸ್ಲಿಮರು.
10577 ರಲ್ಲಿ 23.4% (2482) ವಿಚಾರಣಾಧೀನ ಕೈದಿಗಳು ಕರ್ನಾಟಕದ ಜೈಲಿನಲ್ಲಿರುವ ಮುಸ್ಲಿಮರು.
3569 ರಲ್ಲಿ, 27.5 % (984) ವಿಚಾರಣಾಧೀನ ಕೈದಿಗಳು ಕೇರಳದ ಜೈಲಿನಲ್ಲಿರುವ ಮುಸ್ಲಿಮರು.
16930 ರಲ್ಲಿ, 18.6 % (3161) ವಿಚಾರಣಾಧೀನ ಕೈದಿಗಳು ರಾಜಸ್ಥಾನದ ಜೈಲಿನಲ್ಲಿರುವ ಮುಸ್ಲಿಮರು.
3946 ರಲ್ಲಿ, 26% (1041) ವಿಚಾರಣಾಧೀನ ಕೈದಿಗಳು ತೆಲಂಗಾಣದ ಜೈಲಿನಲ್ಲಿರುವ ಮುಸ್ಲಿಮರು.
472 ರಲ್ಲಿ, 21.8% (103) ತ್ರಿಪುರಾ ಜೈಲಿನಲ್ಲಿರುವ ಮುಸ್ಲಿಮರು.
80557 ರಲ್ಲಿ, 28.3 % (22849) ವಿಚಾರಣಾಧೀನ ಕೈದಿಗಳು ಉತ್ತರ ಪ್ರದೇಶದ ಜೈಲಿನಲ್ಲಿರುವ ಮುಸ್ಲಿಮರು.
3906 ರಲ್ಲಿ, 30.6 % (1199) ವಿಚಾರಣಾಧೀನ ಕೈದಿಗಳು ಉತ್ತರಾಖಂಡ್‌ನಲ್ಲಿ ಮುಸ್ಲಿಮರು
20144 ರಲ್ಲಿ, 43.5% (8774) ವಿಚಾರಣಾಧೀನ ಕೈದಿಗಳು ಪಶ್ಚಿಮ ಬಂಗಾಳದ ಜೈಲಿನಲ್ಲಿರುವ ಮುಸ್ಲಿಮರು.
14506 ರಲ್ಲಿ 26.8 % (3902) ವಿಚಾರಣಾಧೀನ ಕೈದಿಗಳು ದೆಹಲಿಯ ಜೈಲಿನಲ್ಲಿರುವ ಮುಸ್ಲಿಮರು.

ಇನ್ನುಳಿದಂತೆ ಬಂಧಿತ ಕಡೆಗೆ ಅವಲೋಕನ ನಡೆಸಿದಾಗ

1169 ರಲ್ಲಿ, 35.7 % (418) ಬಂಧಿತರು ಗುಜರಾತ್‌ನ ಜೈಲಿನಲ್ಲಿ ಮುಸ್ಲಿಮರಾಗಿದ್ದಾರೆ.
20 ರಲ್ಲಿ, 100% (20) ಬಂಧಿತರು ಹರಿಯಾಣದ ಜೈಲಿನಲ್ಲಿರುವ ಮುಸ್ಲಿಮರು.
42 ರಲ್ಲಿ 38% (16) ಬಂಧಿತರು ಕರ್ನಾಟಕದ ಜೈಲಿನಲ್ಲಿರುವ ಮುಸ್ಲಿಮರು.
46 ರಲ್ಲಿ, 41.3% (19) ಬಂಧಿತರು ಕೇರಳದ ಜೈಲಿನಲ್ಲಿರುವ ಮುಸ್ಲಿಮರು.
79 ರಲ್ಲಿ, ಮಧ್ಯಪ್ರದೇಶದ ಜೈಲಿನಲ್ಲಿರುವ 24% (19) ಬಂಧಿತರು ಮುಸ್ಲಿಮರು.
1430 ರಲ್ಲಿ, 14.7 % (211) ಬಂಧಿತರು ತಮಿಳುನಾಡಿನ ಜೈಲಿನಲ್ಲಿರುವ ಮುಸ್ಲಿಮರು.
258 ರಲ್ಲಿ, 42.6% (110) ಬಂಧಿತರು ತೆಲಂಗಾಣದ ಜೈಲಿನಲ್ಲಿರುವ ಮುಸ್ಲಿಮರು.
101 ರಲ್ಲಿ, 49.5% (50) ಬಂಧಿತರು ಉತ್ತರ ಪ್ರದೇಶದ ಜೈಲಿನಲ್ಲಿರುವ ಮುಸ್ಲಿಮರು.
228 ರಲ್ಲಿ, 96.4 % (220) ಬಂಧಿತರು ಜಮ್ಮು ಮತ್ತು ಕಾಶ್ಮೀರದ ಜೈಲಿನಲ್ಲಿರುವ ಮುಸ್ಲಿಮರು.

Join Whatsapp
Exit mobile version