ಜೋ ಬೈಡನ್ ರ ಶ್ವೇತಭವನದ ಡಿಜಿಟಲ್ ತಂಡದಲ್ಲಿ ಕಾಶ್ಮೀರ ಮೂಲದ ಆಯಿಷಾ ಶಾಗೆ ಹಿರಿಯ ಸ್ಥಾನ

Prasthutha|

ವಾಷಿಂಗ್ಟನ್ : ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರ ಶ್ವೇತಭವನ ಕಚೇರಿಯ ಡಿಜಿಟಲ್ ತಂತ್ರಗಾರಿಕೆಯ ತಂಡದಲ್ಲಿ ಭಾರತದ ಕಾಶ್ಮೀರ ಮೂಲದ ಆಯಿಷಾ ಶಾ ಹಿರಿಯ ಸ್ಥಾನವೊಂದಕ್ಕೆ ನೇಮಕಗೊಂಡಿದ್ದಾರೆ.

- Advertisement -

ಶ್ವೇತಭವನದ ಡಿಜಿಟಲ್ ತಂತ್ರಗಾರಿಕೆಯ ಸಹಭಾಗಿತ್ವಗಳ ನಿರ್ವಾಹಕರ ಹುದ್ದೆಗೆ ಆಯಿಷಾ ನೇಮಕಗೊಂಡಿದ್ದಾರೆ. ಡಿಜಿಟಲ್ ತಂತ್ರಗಾರಿಕೆ ನಿರ್ದೇಶನಾಲಯದ ಮುಖ್ಯಸ್ಥರಾಗಿ ರಾಬ್ ಫ್ಲಾಹೆರ್ಟಿ ಆಯ್ಕೆಯಾಗಿದ್ದಾರೆ.

ಕಾಶ್ಮೀರ ಮೂಲದ ಆಯಿಷಾ ಲೂಸಿಯಾನದಲ್ಲಿ ಬೆಳೆದವರು. ಬೈಡನ್-ಕಮಲಾ ಹ್ಯಾರಿಸ್ ಚುನಾವಣಾ ಪ್ರಚಾರದಲ್ಲಿ ಡಿಜಿಟಲ್ ಸಹಭಾಗಿತ್ವಗಳ ನಿರ್ವಾಹಕರಾಗಿ ಅವರು ಸೇವೆ ಸಲ್ಲಿಸಿದ್ದರು.

Join Whatsapp