ಭಾರತ ಭಾರತೀಯರಿಗೆ ಸೇರಿದ್ದು, ಹಿಂದೂಗಳಿಗೆ ಮಾತ್ರವಲ್ಲ: ರಾಹುಲ್ ಗೆ ಉವೈಸಿ ತಿರುಗೇಟು

Prasthutha|

ಹೈದರಾಬಾದ್‌: ಭಾರತ ಭಾರತೀಯರಿಗೆ ಸೇರಿದ್ದು, ಹಿಂದೂಗಳಿಗೆ ಮಾತ್ರವಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಎಐಎಂಐಎಂ ಪಕ್ಷದ ಸಂಸದ ಅಸದುದ್ದೀನ್‌ ಉವೈಸಿ ತಿರುಗೇಟು ನೀಡಿದ್ದಾರೆ.

- Advertisement -


ಭಾರತವು ಹಿಂದುಗಳ ದೇಶ ಎಂದು ಹೇಳಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಹೇಳಿಕೆಗೆ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿದ ಅವರು, ‘ರಾಹುಲ್ ಮತ್ತು ಕಾಂಗ್ರೆಸ್‌ ಹಿಂದುತ್ವಕ್ಕಾಗಿ ಭೂಮಿ ಹದ ಮಾಡಿದ್ದಾರೆ. ಈಗ ಅವರು ‘ಬಹುಸಂಖ್ಯಾತ ವಾದ’ದ ಬೆಳೆ ಬೆಳೆಯಲು ಪ್ರಯತ್ನ ನಡೆಸುತ್ತಿದ್ದಾರೆ. ಹಿಂದೂಗಳನ್ನು ಅಧಿಕಾರಕ್ಕೆ ತರುವುದು 2021ರ ಅವರ ‘ಜಾತ್ಯತೀತ’ ಅಜೆಂಡಾ ಆಗಿದೆ. ವಾಹ್…! ಭಾರತವು ಭಾರತೀಯರಿಗೆ ಸೇರಿದ್ದು. ಹಿಂದುಗಳಿಗೆ ಮಾತ್ರ ಸೇರಿದ್ದಲ್ಲ ಎಂದು ಹೇಳಿದ್ದಾರೆ.

ಭಾನುವಾರ ಜೈಪುರದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ ಅವರು, ‘ಹಿಂದು ಮತ್ತು ಹಿಂದುತ್ವದ ನಡುವೆ ಬಹಳ ವ್ಯತ್ಯಾಸವಿದೆ. ಭಾರತವು ಹಿಂದುಗಳಿಗೆ ಸೇರಿದ್ದು, ಹಿಂದುತ್ವವಾದಿಗಳದ್ದಲ್ಲ’ ಎಂದು ಹೇಳಿದ್ದರು.

- Advertisement -

ಜೊತೆಗೆ, ಮಹಾತ್ಮ ಗಾಂಧೀಜಿ ಅವರನ್ನು ಹಿಂದು ಎಂದಿದ್ದ ರಾಹುಲ್‌ ಗಾಂಧಿ ಅವರು, ಗೋಡ್ಸೆಯನ್ನು ಹಿಂದುತ್ವವಾದಿ ಎಂದು ಕರೆದಿದ್ದರು.

Join Whatsapp
Exit mobile version