Home ಕ್ರೀಡೆ ಟೋಕಿಯೋ ಒಲಿಂಪಿಕ್ಸ್: ಹಾಕಿಯಲ್ಲಿ ನ್ಯೂಜಿಲೆಂಡ್ ಮಣಿಸಿ ಶುಭಾರಂಭ ಮಾಡಿದ ಭಾರತ

ಟೋಕಿಯೋ ಒಲಿಂಪಿಕ್ಸ್: ಹಾಕಿಯಲ್ಲಿ ನ್ಯೂಜಿಲೆಂಡ್ ಮಣಿಸಿ ಶುಭಾರಂಭ ಮಾಡಿದ ಭಾರತ

ಟೋಕಿಯೋ: ಹರ್ಮನ್ಪ್ರೀತ್ ಸಿಂಗ್ ಬಾರಿಸಿದ ಎರಡು ಗೋಲು ಹಾಗೂ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಮನೋಜ್ಞ ಪ್ರದರ್ಶನದ ನೆರವಿನಿಂದ ಭಾರತ ಹಾಕಿ ತಂಡವು ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 3-2 ಗೋಲುಗಳ ಅಂತರದಲ್ಲಿ ಜಯ ಸಾಧಿಸುವ ಮೂಲಕ ಭಾರತ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶುಭಾರಂಭ ಮಾಡಿದೆ.

ನಾಲ್ಕನೇ ಶ್ರೇಯಾಂಕಿತ ಮನ್ಪ್ರೀತ್ ಸಿಂಗ್ ನೇತೃತ್ವದ ಭಾರತ ಪುರುಷರ ಹಾಕಿ ತಂಡವು ಹುಮ್ಮಸ್ಸಿನಿಂದ ಆಟಕ್ಕೆ ಇಳಿದು 40 ವರ್ಷಗಳಿಂದ ಒಲಿಯದ ಒಲಿಂಪಿಕ್ ಪದಕವನ್ನು ಕೊರಳಿಗೇರಿಸಲು ಸಂಕಲ್ಪ ತೊಟ್ಟಿದೆ.
ಪಂದ್ಯದ ಆರನೇ ನಿಮಿಷದಲ್ಲಿ ಕೇನ್ ರಸೆಲ್ ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.

ಇದರೊಂದಿಗೆ ನ್ಯೂಜಿಲೆಂಡ್ ಹಾಕಿ ತಂಡವು ಮೊದಲ ಕ್ವಾರ್ಟರ್ನ ಆರಂಭದಲ್ಲೇ 1-0 ಮುನ್ನಡೆ ಸಾಧಿಸಿತು. ಇದಾಗಿ ಕೆಲ ಹೊತ್ತಿನಲ್ಲೇ, ಅಂದರೆ ಪಂದ್ಯದ 10ನೇ ನಿಮಿಷದಲ್ಲಿ ರೂಪಿಂದರ್ ಪಾಲ್ ಗೋಲು ಬಾರಿಸುವ ಭಾರತದ ಗೋಲುಗಳ ಖಾತೆ ತೆರೆದರು. ಹರ್ಮನ್ ಪ್ರೀತ್ ಕೂಡ ಗೋಲು ಹೊಡೆದು ತಂಡದ ಗೆಲುವಿಗೆ ನೆರವಾದರು.
ಭಾನುವಾರ ಆಸ್ಟ್ರೇಲಿಯಾ ಜೊತೆ ಭಾರತ ಸೆಣಸಲಿದೆ.

Join Whatsapp
Exit mobile version