Home ಟಾಪ್ ಸುದ್ದಿಗಳು ಗೊಂದಲ ಮುಂದುವರಿದರೆ ಇಂಡಿಯಾ ಮೈತ್ರಿಕೂಟ ಯಶಸ್ವಿಯಾಗಲ್ಲ: ಅಖಿಲೇಶ್ ಯಾದವ್

ಗೊಂದಲ ಮುಂದುವರಿದರೆ ಇಂಡಿಯಾ ಮೈತ್ರಿಕೂಟ ಯಶಸ್ವಿಯಾಗಲ್ಲ: ಅಖಿಲೇಶ್ ಯಾದವ್

ನವದೆಹಲಿ: ಈಗಿರುವ ಗೊಂದಲವು ಮುಂದುವರಿದರೆ ಇಂಡಿಯಾ ಮೈತ್ರಿಕೂಟವು ಬಿಜೆಪಿಯನ್ನು ಸೋಲಿಸಲು ಎಂದಿಗೂ ಸಾಧ್ಯವಾಗುವುದಿಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಶುಕ್ರವಾರ ಹೇಳಿದ್ದಾರೆ.

ದೇಶಕ್ಕೆ 2024 ರಲ್ಲಿ ದೊಡ್ಡ ಸವಾಲಿದೆ. ಬಿಜೆಪಿ ಒಂದು ದೊಡ್ಡ ಪಕ್ಷವಾಗಿದೆ. ಅದು ಅತ್ಯಂತ ಸಂಘಟಿತವಾಗಿ ಸಜ್ಜಾಗಿದೆ. ಆದ್ದರಿಂದ ಅದನ್ನು ಎದುರಿಸಲು ಇಂಡಿಯಾ ಮೈತ್ರಿಕೂಟದಲ್ಲಿ ಯಾವುದೇ ಗೊಂದಲ ಉಂಟಾಗಬಾರದು. ನೀವು ಗೊಂದಲದಿಂದ ಬಿಜೆಪಿಯನ್ನು ಎದುರಿಸಿದರೆ, ನೀವು ಯಶಸ್ವಿಯಾಗುವುದಿಲ್ಲ ಎಂದು ಅಖಿಲೇಶ್ ಹೇಳಿದ್ದಾರೆ.

ಮಧ್ಯ ಪ್ರದೇಶ ಚುನಾವಣೆಗೆ ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಅಖಿಲೇಶ್ ಯಾದವ್ ‘ಕೈ’ ಪಡೆ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ರಾಷ್ಟ್ರವ್ಯಾಪಿ ಜಾತಿ ಆಧಾರಿತ ಜನಗಣತಿಗೆ ಕಾಂಗ್ರೆಸ್ಸಿನ ಬೇಡಿಕೆಯ ಬಗ್ಗೆ ಟೀಕಾ ಪ್ರಹಾರ ನಡೆಸಿದ ಅವರು, ಇದೊಂದು ಪವಾಡ ಎಂದು ಹೇಳಿದ್ದಾರೆ.

Join Whatsapp
Exit mobile version