ನವದೆಹಲಿ: ಇಂಡಿಯಾ ಮೈತ್ರಿ ಕೂಟವು ಪ್ರಧಾನಿ ನರೇಂದ್ರ ಮೋದಿಯವರ ಆತ್ಮ ವಿಶ್ವಾಸವನ್ನು ಬುಡಮೇಲು ಮಾಡಿದೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಇಂಡಿಯಾ ಸಿದ್ಧಾಂತ, ಪ್ರೀತಿ ಮತ್ತು ಏಕತೆ ನರೇಂದ್ರ ಮೋದಿಯವರ ಆತ್ಮಸ್ಥೈರ್ಯವನ್ನು ಮುರಿದಿದೆ ಎಂದರು.
ಕಾಶ್ಮೀರದಲ್ಲಿ ಮಾತನಾಡಿದ ಅವರು, ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯಾ ನಂತರ ಹಲವು ಬಾರಿ ಕೇಂದ್ರಾಡಳಿತ ಪ್ರದೇಶವನ್ನು ರಾಜ್ಯವನ್ನಾಗಿ ಪರಿವರ್ತಿಸಲಾಗಿದೆ ಆದರೆ ರಾಜ್ಯದ ಸ್ಥಾನಮಾನವನ್ನು ಕಸಿದುಕೊಂಡು ಕೇಂದ್ರಾಡಳಿತ ಪ್ರದೇಶ ಮಾಡಿದ ಉದಾಹರಣೆ ಒಂದೇ ಇದೆ ಎಂದರು.
ಜಮ್ಮು ಮತ್ತು ಕಾಶ್ಮೀರದ ಜನರ ಪ್ರಾತಿನಿಧ್ಯ ನಮಗೆ ಮತ್ತು ದೇಶದ ಜನರಿಗೆ ಮುಖ್ಯ, ಅದಕ್ಕಾಗಿಯೇ ನಾವು ಇಲ್ಲಿಗೆ ಮೊದಲು ಬಂದಿದ್ದೇವೆ ಎಂದರು.
ನಿಮ್ಮ ಭಯ, ನೀವು ಅನುಭವಿಸುವ ದುಃಖ, ನಾನು, ಮಲ್ಲಿಕಾರ್ಜುನ ಖರ್ಗೆ, ಇಡೀ ಕಾಂಗ್ರೆಸ್ ಪಕ್ಷವು ಶಾಶ್ವತವಾಗಿ ಅಳಿಸಲು ಬಯಸುತ್ತದೆ. ದ್ವೇಷವನ್ನು ಪ್ರೀತಿಯಿಂದ ಸೋಲಿಸುತ್ತೇವೆ.