Home ಕರಾವಳಿ ಮಂಗಳೂರು| ಮಧ್ಯರಾತ್ರಿ ಮಸೀದಿಗೆ ನುಗ್ಗಿ ಮಹಿಳೆಯರೊಂದಿಗೆ ಅಸಭ್ಯ ವರ್ತನೆ; ಆರೋಪಿ ಸುಜಿತ್ ಶೆಟ್ಟಿ ಬಂಧನ

ಮಂಗಳೂರು| ಮಧ್ಯರಾತ್ರಿ ಮಸೀದಿಗೆ ನುಗ್ಗಿ ಮಹಿಳೆಯರೊಂದಿಗೆ ಅಸಭ್ಯ ವರ್ತನೆ; ಆರೋಪಿ ಸುಜಿತ್ ಶೆಟ್ಟಿ ಬಂಧನ

ತೊಕ್ಕೊಟ್ಟು: ಮಧ್ಯರಾತ್ರಿ ಮಸೀದಿಗೆ ನುಗ್ಗಿದ ದುಷ್ಕರ್ಮಿಯೊಬ್ಬ ಪ್ರಾರ್ಥನಾನಿರತ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ತೊಕ್ಕೊಟ್ಟು ಹುದಾ ಮಸ್ಜಿದ್ ನಲ್ಲಿ ನಡೆದಿದ್ದು, ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ತಾಲೂಕಿನ ನಿಟ್ಟೆ ನಿವಾಸಿ ಸುಜಿತ್ ಶೆಟ್ಟಿ (26) ಬಂಧಿತ ಆರೋಪಿ.

ಶುಕ್ರವಾರ ತಡರಾತ್ರಿ ಸುಮಾರು 11.30ಕ್ಕೆ ತೊಕ್ಕೊಟ್ಟುವಿನಲ್ಲಿರುವ ಹುದಾ ಮಸ್ಜಿದ್ ನಲ್ಲಿ ರಂಝಾನ್ ಪ್ರಯುಕ್ತ ಆಯೋಜಿಸಲಾಗಿದ್ದ ಲೈಲತುಲ್ ಖದ್ರ್ ವಿಶೇಷ ನಮಾಝ್ ಗಾಗಿ ನೆರದಿದ್ದ ವೇಳೆ ಮಹಿಳೆಯರ ನಮಾಝ್ ಕೊಠಡಿಗೆ ನುಗ್ಗಿದ ಆರೋಪಿ ಸುಜಿತ್ ಶೆಟ್ಟಿ ಅಲ್ಲಿ ನೆರದಿದ್ದ ಮಹಿಳೆಯರ ಕೈ ಹಿಡಿದೆಳೆದು, ತನ್ನ ಪ್ಯಾಂಟಿನ ಜಿಪ್ ತೆರೆದು ಗುಪ್ತಾಂಗವನ್ನು ತೋರಿಸಿ ಅಸಭ್ಯವಾಗಿ ವರ್ತಿಸಿ ವಿಕೃತ ಮೆರೆದಿದ್ದ.

ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯರು ನೀಡಿದ ದೂರಿನನ್ವಯ ಉಳ್ಳಾಲ ಪೊಲೀಸರು ಆರೋಪಿ ಸುಜಿತ್ ಶೆಟ್ಟಿ ವಿರುದ್ಧ ಐಪಿಸಿ ಸೆಕ್ಷನ್ 448, 354, 509, 295ಎ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.

Join Whatsapp
Exit mobile version