ನಾಳೆ ಬೆಳಗ್ಗೆ ಹಂಸಲೇಖ ಅವರಿಂದ ಮೈಸೂರು ದಸರಾ ಉದ್ಘಾಟನೆ

Prasthutha|

ಮೈಸೂರು: ದಸರಾ ಮಹೋತ್ಸವ 2023 ರ ಉದ್ಘಾಟನೆಯು ನಾಳೆ ಬೆಳಗ್ಗೆ (ಅಕ್ಟೊಬರ್ 15 ) ನಡೆಯಲಿದ್ದು, ನಾದಬ್ರಹ್ಮ ಡಾ. ಹಂಸಲೇಖ ಬೆಳಗ್ಗೆ ಸುಮಾರು 10 ಗಂಟೆಯ ಹೊತ್ತಿಗೆ ನೆರವೇರಿಸಲಿದ್ದಾರೆ.

ಮೈಸೂರು ದಸರಾ ಮಹೋತ್ಸವ ಅ 24 ರಂದು ಮಂಗಳವಾರ ನಡೆಯಲಿದೆ. ಅಂದು ಮಧ್ಯಾಹ್ನ 1.46 ರಿಂದ 2.08 ಗಂಟೆಯವರೆಗೆ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ಹಾಗೂ ಸಂಜೆ 4.40 ರಿಂದ 5.00 ರವರೆಗೆ‌ ಅರಮನೆ ಆವರಣದಲ್ಲಿ ವಿಜಯದಶಮಿ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ.

ದಸರಾ ಗಜಪಡೆ ಮತ್ತು ಅಶ್ವಪಡೆಗೆ 2ನೇ ಹಂತದ ಫಿರಂಗಿ ಸಿಡಿಮದ್ದು ತಾಲೀಮು ಶುಕ್ರವಾರ ಯಶಸ್ವಿಯಾಗಿ ನಡೆಯಿತು.

 

ಅಂಬಾರಿ ಆನೆ ಅಭಿಮನ್ಯು ನೇತೃತ್ವದ 9 ಆನೆ, 27 ಆಶ್ವಗಳಿಗೆ 7 ಫಿರಂಗಿಗಳಲ್ಲಿ 3 ಸುತ್ತಿನಂತೆ ಒಟ್ಟು 21 ಕುಶಾಲತೋಪು ಸಿಡಿಸಿ ಭಾರೀ ಶಬ್ದದ ಪರಿಚಯ ಮಾಡಿಸಲಾಯಿತು.