Home ಕರಾವಳಿ ಮಂಗಳೂರು ತಾಲೂಕು ಬಿಲ್ಲವ ಸಂಘದ ಕಚೇರಿ ಉದ್ಘಾಟನೆ

ಮಂಗಳೂರು ತಾಲೂಕು ಬಿಲ್ಲವ ಸಂಘದ ಕಚೇರಿ ಉದ್ಘಾಟನೆ

ಮಂಗಳೂರು: ‘ಸಂಘಟನೆಯಿಂದ ಬಲಯುತವಾಗಿ’ಎಂದು ಶ್ರೀ ನಾರಾಯಣ ಗುರುಗಳು ಹೇಳಿದಂತೆ, ಬಿಲ್ಲವ ಸಮುದಾಯವು ಇದೀಗ ಹಂತ ಹಂತವಾಗಿ ಬಲಾಢ್ಯಗೊಳ್ಳುತ್ತಿದೆ ಎಂಬುದಕ್ಕೆ ಇಂದಿಲ್ಲಿ ಸಂಘಟಿತಗೊಂಡ ತಾಲೂಕು ಬಿಲ್ಲವ ಸಂಘ ಹಾಗೂ ಸಂಘದ ಕಚೇರಿ ಉದ್ಘಾಟನಾ ಸಮಾರಂಭ ಸಾಕ್ಷ್ಯಿಯಾಗಿದೆ.

ಸಂಘದ ಮೂಲಕ ಮಂಗಳೂರು ತಾಲೂಕಿನ ಬಿಲ್ಲವ ಸಮಾಜ ಸೇವಾ ಸಂಘಗಳ ಸಹಿತ ಬಿಲ್ಲವ ಯುವಜನ ಶಕ್ತಿಯ ಕ್ರೋಢೀಕರಣವಾಗಬೇಕು. ಸಮುದಾಯದ ಒಗ್ಗಟ್ಟಿಗೆ ಸಂಘ ಕೊಂಡಿಯಾಗಬೇಕು ಎಂದು ಬಿಲ್ಲವ ಮುಖಂಡ ಹಾಗೂ ಎಂಎಲ್ ಸಿ ಹರೀಶ್ ಕುಮಾರ್ ಅಭಿಪ್ರಾಯಪಟ್ಟರು.

ಮಂಗಳೂರಿನ ಹೃದಯಭಾಗ ಕಾರ್ ಸ್ಟ್ರೀಟ್ ನಲ್ಲಿ ಸ್ಥಾಪಿಸಲಾದ ಮಂಗಳೂರು ತಾಲೂಕು ಬಿಲ್ಲವ ಸಂಘದ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅವರು ದೀಪ ಬೆಳಗಿಸಿ ಮಾತನಾಡಿದರು.

ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ ಮಾತನಾಡಿ, ಬಿಲ್ಲವ ಸಮುದಾಯವು ಒಗ್ಗೂಡಿ ಕೆಲಸ ಮಾಡುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಶ್ರೀ ಗೋಕರ್ಣನಾಥೇಶ್ವರ ಹಾಗೂ ನಾರಾಯಣ ಗುರುಗಳ ಆರ್ಶೀರ್ವಾದದೊಂದಿಗೆ ರಚನೆಯಾಗಿರುವ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದಿಂದ ಬಿಲ್ಲವ ಸಮಾಜದ ಏಳಿಗಾಗಿ ತಳಮಟ್ಟದ ಕೆಲಸವಾಗಲಿ. ದೇವಸ್ಥಾನದ ಕಡೆಯಿಂದ ಸಂಘಕ್ಕೆ ಸಂಪೂರ್ಣ ಸಹಕಾರವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಿತೇಂದ್ರ ಸುವರ್ಣ ಸ್ವಾಗತಿಸಿ, ಸಂಘ ರಚನೆಯ ಉದ್ದೇಶ ವಿವರಿಸಿದರು. ಸಮಾರಂಭದಲ್ಲಿ ಗೌರವಾಧ್ಯಕ್ಷ ರಂಜನ್ ಮಿಜಾರು, ಕೋಶಾಧಿಕಾರಿ ಪುರುಷೋತ್ತಮ ಪೂಜಾರಿ ಹಾಗೂ ಬಿಲ್ಲವ ಮುಖಂಡರಾದ ಚರಣ್, ಸುರೇಶ್ಚಂದ್ರ ಕೋಟ್ಯಾನ್, ರಾಘವ ಅಮೀನ್, ಗಣೇಶ್ ಪೂಜಾರಿ ಗಂಜಿಮಠ, ಯೋಗೀಶ್, ಜಯರಾಮ ಕರಂದೂರು, ಸುರೇಶ್ ವಿ ಪೂಜಾರಿ ಕುಳಾಯಿ, ತುಕಾರಾಮ ಪೂಜಾರಿ, ರವಿಚಂದ್ರ, ಶಿವರಾಜ್, ಶಶಿಧರ ವಿಟ್ಲ, ಕೆ. ವೆಂಕಟೇಶದಾಸ್, ರಾಮಚಂದ್ರ, ಪ್ರಜ್ವಲ್ ಮಿಜಾರು, ಪಾರ್ವತಿ ಅಮೀನ್ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಲೋಕನಾಥ ಪೂಜಾರಿ ವಂದಿಸಿದರು..

Join Whatsapp
Exit mobile version