ಚಿಕ್ಕಮಗಳೂರು: ಕಾಫಿನಾಡು ಕಾಂಗ್ರೆಸ್ ಕಚೇರಿಯಲ್ಲಿ ಮಾರಾಮಾರಿ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದ ಕಾರ್ಯಕರ್ತರೇ ಥಳಿಸಿದ್ದಾರೆ.
ಪಕ್ಷದ ಟಿಕೆಟ್ ಹಂಚಿಕೆ ಸಂಬಂಧ ನಡೆd ಸಭೆಯಲ್ಲಿ ಕೆಪಿಸಿಸಿ ಸಂಯೋಜಕ ಪವನ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಪಕ್ಷದ ವರಿಷ್ಠರು ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಮಂಜೇಗೌಡ ಹೇಳುತ್ತಿದ್ದಂತೆ ಮಾರಾಮಾರಿ ಆರಂಭಗೊಂಡಿದೆ.
ಯಾರಿಗೋ ಅಲ್ಲ… ಅರ್ಜಿ ಹಾಕಿದವರಿಗೆ ಟಿಕೆಟ್ ಕೊಡಿ ಎಂದು ಕೆಲವು ಕಾರ್ಯಕರ್ತರು ರಂಪಾಟ ಆರಂಭಿಸಿದರು. ಪರೋಕ್ಷವಾಗಿ ಎಚ್.ಡಿ. ತಮ್ಮಯ್ಯ ವಿರುದ್ಧ ಕಾಂಗ್ರೆಸ್ಸಿಗರು ಕಿಡಿ ಕಾರಿದ್ದಾರೆ ಎನ್ನಲಾಗಿದೆ.
ಕ್ಷೇತ್ರದಲ್ಲಿ ಆರು ಜನ ಅರ್ಜಿ ಹಾಕಿ ಟಿಕೆಟ್ ಗಾಗಿ ಕಾಯುತ್ತಿದ್ದಾರೆ.