►► ಆದಿ ಉಡುಪಿ ಪ್ರಕರಣದ ಪ್ರಮುಖ ಆರೋಪಿಯಿಂದ ಪ್ರಚೋದನಕಾರಿ ಹೇಳಿಕೆ
ಉಡುಪಿ: ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳದಲ್ಲೂ ಹಿಜಾಬ್ ಹಾಕಲು ಬಿಡಲ್ಲ. ಶಾಲಾ ಕಾಲೇಜಿನಲ್ಲಿ ಮಾತ್ರವಲ್ಲ ಹಿಜಾಬ್ ಅನ್ನು ಹೊರಗಡೆ ಹಾಕದೇ ಇರುವ ಪರಿಸ್ಥಿತಿ ಬರುತ್ತದೆ ಎಂದು ಬಿಜೆಪಿಯ ಮುಖಂಡ ಯಶ್ ಪಾಲ್ ಸುವರ್ಣ ಹೇಳಿದ್ದಾನೆ.
ಫ್ರಾನ್ಸ್ ಗೂ ಉಡುಪಿಯ ಹಿಜಾಬ್ ವಿಚಾರ ಪ್ರೇರಣೆಯಾಗಿದ್ದು ಖುಷಿಯ ವಿಚಾರ. ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದ ರಾಜ್ಯ, ರಾಷ್ಟ್ರ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಜಾಗೃತಿಗೆ ಕಾರಣವಾಗಿದೆ. ಫ್ರಾನ್ಸ್ ರಾಜಕೀಯ ಪಕ್ಷದ ಪ್ರಣಾಳಿಕೆ ಹಿಜಾಬ್ ಬ್ಯಾನ್ ಮತ್ತು ಹಲಾಲ್ ಬ್ಯಾನ್ ಆಗಿದೆ. ಇದು ಮುಂದೆ ಎಲ್ಲಾ ರಾಷ್ಟ್ರಗಳಲ್ಲೂ ಆಗುತ್ತೆ ಎಂದಿದ್ದಾನೆ.
ದನ ಸಾಗಾಟ ಮಾಡಿದ ಆರೋಪ ಹೊರಿಸಿ ಆದಿ ಉಡುಪಿಯಲ್ಲಿ ಹಾಜಬ್ಬ ಹಸನಬ್ಬ ಎಂಬವರನ್ನು ವಿವಸ್ತ್ರಗೊಳಿಸಿದ ಪ್ರಕರಣದಲ್ಲಿ ಯಶ್ಪಾಲ್ ಸುವರ್ಣ ಪ್ರಮುಖ ಆರೋಪಿಯಾಗಿದ್ದಾನೆ. ಅದರ ಜೊತೆಗೆ 2006 ರಲ್ಲಿ ಬ್ಯಾಂಕ್ ಸೀಝರ್ ಆಗಿ ಕೆಲಸ ಮಾಡುತ್ತಿದ್ದ ಈತ ಸಾಲ ಮರುಪಾವತಿ ಮಾಡುವಂತೆ ಬಲವಂತಪಡಿಸಿ ವ್ಯಕ್ತಿಯೋರ್ವನನ್ನು ಅಪಹರಿಸಿದ ಘಟನೆಗೆ ಸಂಬಂಧಪಟ್ಟಂತೆ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.