Home ಟಾಪ್ ಸುದ್ದಿಗಳು ಪ್ರತ್ಯೇಕ ಘಟನೆ: ಹೃದಯಾಘಾತದಿಂದ ಕಾನ್ಸ್’ಟೇಬಲ್, ಉಪನ್ಯಾಸಕ ಮೃತ್ಯು

ಪ್ರತ್ಯೇಕ ಘಟನೆ: ಹೃದಯಾಘಾತದಿಂದ ಕಾನ್ಸ್’ಟೇಬಲ್, ಉಪನ್ಯಾಸಕ ಮೃತ್ಯು

ರಾಯಚೂರು: ಆರೋಗ್ಯವಾಗಿದ್ದ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ರಾಯಚೂರು ಜಿಲ್ಲೆಯ ಮಸ್ಕಿ ಪೊಲೀಸ್ ಠಾಣೆ ಕಾನ್ಸ್ಟೇಬಲ್ ಬಸನಗೌಡ(34) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದ ನಿವಾಸಿಯಾಗಿದ್ದ ಬಸನಗೌಡ, ಯಾವುದೇ ಬಿಪಿ,ಶುಗರ್ ಹಾಗೂ ಹೃದಯ ಸಂಬಂಧಿ ಖಾಯಿಲೆ ಇಲ್ಲದೇ ಆರೋಗ್ಯವಾಗಿದ್ದರು. ಆದರೆ, ನಿನ್ನೆ (ಆಗಸ್ಟ್ 10) ರಾತ್ರಿ ಮಲಗಿದ್ದಲ್ಲೇ ಬಸನಗೌಡಗೆ ಹೃದಯಾಘಾತವಾಗಿದೆ. ಇನ್ನು ಸಿಬ್ಬಂದಿ ಸಾವಿಗೆ ಸಂತಾಪ ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ಸೂಚಿಸಿದೆ.


ಇನ್ನೊಂದು ಕಡೆ ಹಾಸನದಲ್ಲಿ ಹೃದಯಾಘಾತದಿಂದ ಉಪನ್ಯಾಸಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತ್ಯಾಗರಾಜ್ ಎಂಟಿ (56) ಮೃತ ಉಪನ್ಯಾಸಕ. ಹಳೇಕೋಟೆ ಹೋಬಳಿ, ಹರದನಹಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತ್ಯಾಗರಾಜ್ ರಾತ್ರಿ ಮನೆಯಲ್ಲಿ ಕುರ್ಚಿ ಮೇಲೆ ಕುಳಿತು ಟಿವಿ ನೋಡುತ್ತಿದ್ದರು. ಈ ವೇಳೆ ಹೃದಯಾಘಾತವಾಗಿ ಅವರು ಕುಳಿತಲ್ಲೇ ಸಾವನ್ನಪ್ಪಿದ್ದಾರೆ.

ಉಪನ್ಯಾಸಕ ತ್ಯಾಗರಾಜ್

Join Whatsapp
Exit mobile version