Home ಟಾಪ್ ಸುದ್ದಿಗಳು ಬೆಂಗಳೂರು: ಒಂದೇ ತಿಂಗಳಲ್ಲಿ 24 ಪೋಕ್ಸೋ ಪ್ರಕರಣಗಳು ದಾಖಲು

ಬೆಂಗಳೂರು: ಒಂದೇ ತಿಂಗಳಲ್ಲಿ 24 ಪೋಕ್ಸೋ ಪ್ರಕರಣಗಳು ದಾಖಲು

ಸಾಂದರ್ಭಿಕ ಚಿತ್ರ

ಬೆಂಗಳೂರು: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳಿಗೆ ಪೋಕ್ಸೋ (Pocso) ಕಾಯ್ದೆಯಡಿ ಶಿಕ್ಷೆ ನೀಡಲಾಗುತ್ತದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೋಕ್ಸೊ ಪ್ರಕರಣ ಹೆಚ್ಚಾಗುತ್ತಿದೆ. ಒಂದೇ ತಿಂಗಳಲ್ಲಿ 24 ಪ್ರಕರಣಗಳು ದಾಖಲಾಗಿವೆ. ನೆರೆ ಮನೆಯವರು, ಸಂಬಂಧಿಕರೂ ಮಕ್ಕಳ ಮೇಲೆ ದೌರ್ಜ್ಯನೆವೆಸಗಿರುವುದೇ ಹೆಚ್ಚಾಗಿದೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಹದಿಹರೆಯದ ಯುವತಿಯರು

ಇದೊಂದಡೆಯಾದರೇ ಕೆಲ ತಿಂಗಳ ಹಿಂದೆ ಬಿಡುಗಡೆಯಾದ ವರದಿ ಪ್ರಕಾರ ಹದಿಹರೆಯದ ಯುವತಿಯರು ಪ್ರೇಮಕ್ಕೆ ಸಿಲುಕುತ್ತಿದ್ದು, ಇದರಿಂದ ಪೋಕ್ಸೋ ಪ್ರಕರಣಗಳ ಸಂಖ್ಯೆ ಏರಿಕೆಯತ್ತ ಸಾಗುತ್ತಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಓದುವ ಹಂತದಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಮೊಬೈಲ್‌ ಬಳಕೆ, ಸಾಮಾಜಿಕ ಜಾಲತಾಣ, ಸಿನಿಮಾ ಇತ್ಯಾದಿ ಪ್ರೇರಣೆಯಿಂದ ಪ್ರೀತಿ, ಪ್ರೇಮ, ಪ್ರಣಯದಂತ ಮೋಸದ ಬಲೆಗೆ ಸಿಲುಕುತ್ತಾರೆ. ನಂತರ ಅತ್ಯಾಚಾರ, ಶೋಷಣೆ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇದು ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.

ಏನಿದು ಪೋಕ್ಸೋ ಕಾಯ್ದೆ?

2012 Protection of Children from Sexual Offences Act ಅನ್ನು (POCSO ACT) ಎಂದು ಕರೆಯಲಾಗುತ್ತಿದೆ. ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಅಶ್ಲೀಲತೆಯ ಅಪರಾಧಗಳಿಂದ ಮಕ್ಕಳ ರಕ್ಷಣೆಗಾಗಿ ದೃಢವಾದ ಕಾನೂನು ಚೌಕಟ್ಟನ್ನು ಒದಗಿಸಲು ಪೊಕ್ಸೊ ಕಾಯ್ದೆಯನ್ನು 2012ರಲ್ಲಿ ಜಾರಿಗೆ ತರಲಾಯಿತು. ಈ ಮೂಲಕ ಮಕ್ಕಳನ್ನು ಎಲ್ಲ ರೀತಿಯ ಲೈಂಗಿಕ ದೌರ್ಜನ್ಯ ಅಪರಾಧಗಳಿಂದ ಪಾರು ಮಾಡುವುದು ಕಾಯಿದೆಯ ಮುಖ್ಯ ಉದ್ದೇಶವಾಗಿದೆ. ಈ ಕಾಯಿದೆ ಯಾವುದೇ ಲಿಂಗತಾರತಮ್ಯ ಮಾಡುವುದಿಲ್ಲ. ಬಾಲಕಿ ಮತ್ತು ಬಾಲಕ ಇಬ್ಬರನ್ನು ಲೌಂಗಿಕ ದೌರ್ಜನ್ಯದ ಸಂತ್ರಸ್ತರು ಎಂದು ಪರಿಗಣಿಸುತ್ತದೆ.

ಪೋಕ್ಸೋ ಕಾಯ್ದೆ ಅಡಿ ಶಿಕ್ಷೆ

• ಪೋಕ್ಸೋ ಕಾಯಿದೆಯಡಿಯ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ. 2019ರ ತಿದ್ದುಪಡಿಯ ಬಳಿಕ ಶಿಕ್ಷೆ ಇನ್ನಷ್ಟು ಕಠಿಣಗೊಳಿಸಲಾಗಿದೆ. ಈ ಕಾಯಿದೆಯಡಿ ಗರಿಷ್ಠ ದಂಡದೊಂದಿಗೆ ಕಠಿಣ ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಮಕ್ಕಳ ಮೇಲಿನ ಲೈಂಗಿಕ ಬೇಧಕ ಅಪರಾಧಕ್ಕೆ ಕಾಯಿದೆಯಡಿ ಶಿಕ್ಷೆಯನ್ನು ನಿಗದಿಪಡಿಸಲಾಗಿದೆ. ಈ ಅಪರಾಧಕ್ಕೆ ಆರೋಪಿಗೆ 10 ವರ್ಷಕ್ಕಿಂತ ಕಡಿಮೆ ಇಲ್ಲದ ಜೀವಾವಧಿ ಶಿಕ್ಷೆ ಖಚಿತ ಮತ್ತು ಅದನ್ನು ವಿಸ್ತರಿಸಲೂಬಹುದು. ಈ ಕನಿಷ್ಠ ಶಿಕ್ಷೆಯನ್ನು 20 ವರ್ಷಗಳವರೆಗೂ ಹೆಚ್ಚಿಸಬಹುದಾಗಿದೆ.

ಬೇಧಕ ಲೈಂಗಿಕ ದೌರ್ಜನ್ಯ: ಈ ಅಪರಾಧಕ್ಕೆ ಕನಿಷ್ಟ 7 ವರ್ಷಗಳಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಹೆಚ್ಚಿಸಲಾಗಿದೆ. 16 ವರ್ಷದೊಳಗಿನ ಮಗುವಿನ ಮೇಲೆ ಬೇಧಕ ಲೈಂಗಿಕ ದೌರ್ಜನ್ಯ ನಡೆಸಿದರೆ, ಅಪರಾಧಿಗೆ ದಂಡಸಹಿತ 20 ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದಾಗಿದೆ.

ತೀವ್ರ ಬೇಧಕ ಲೈಂಗಿಕ ದೌರ್ಜನ್ಯ: ತೀವ್ರ ಬೇಧಕ ಲೈಂಗಿಕ ದೌರ್ಜನ್ಯಕ್ಕೆ ಇದ್ದ 10 ವರ್ಷಗಳ ಶಿಕ್ಷೆಯನ್ನು 20 ವರ್ಷಗಳವರೆಗೂ ಹೆಚ್ಚಿಸಲಾಗಿದೆ. ಗರಿಷ್ಠ ಜೀವಾವಧಿ ಶಿಕ್ಷೆಯಿಂದ ಮರಣ ದಂಡನೆ ಕೂಡ ವಿಧಿಸಬಹುದು.

ಅಶ್ಲೀಲ ಚಿತ್ರಗಳಲ್ಲಿ ಮಗುವನ್ನು ಬಳಸುವುದು: ಈ ಅಪರಾಧದಲ್ಲಿ ಆರೋಪಿಗೆ ಕನಿಷ್ಠ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಒಂದೊಮ್ಮೆ ಬೇಧಕ ಲೈಂಗಿಕ ದೌರ್ಜನ್ಯ ನಡೆದಿದ್ದರೆ ಗರಿಷ್ಠ 20 ವರ್ಷಗಳ ವರೆಗೆ ಶಿಕ್ಷೆ ವಿಧಿಸಬಹುದು, ಅಶ್ಲೀಲ ಸಾಮಗ್ರಿಗಳ ಸಂಗ್ರಹ ಅಪರಾಧಕ್ಕೆ ಕನಿಷ್ಠ 3 ವರ್ಷಗಳವರೆಗೆ ಇದ್ದ ಶಿಕ್ಷೆಯನ್ನು 5 ವರ್ಷಗಳವರೆಗೆ ಹೆಚ್ಚಿಸಲಾಗಿದೆ.

Join Whatsapp
Exit mobile version