Home ಟಾಪ್ ಸುದ್ದಿಗಳು ಛತ್ತೀಸ್‌ಗಢದಲ್ಲೂ ಬಿಜೆಪಿ ಮ್ಯಾಜಿಕ್ ನಂಬರ್‌ನತ್ತ ದಾಪುಗಾಲು

ಛತ್ತೀಸ್‌ಗಢದಲ್ಲೂ ಬಿಜೆಪಿ ಮ್ಯಾಜಿಕ್ ನಂಬರ್‌ನತ್ತ ದಾಪುಗಾಲು

ತೀವ್ರ ಕುತೂಹಲ ಕೆರಳಿಸಿರುವ ಛತ್ತೀಸ್ ಗಢ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಯತ್ತ ಸಾಗಿದೆ. ಬಿಜೆಪಿಯು ಆಡಳಿತಾರೂಢ ಕಾಂಗ್ರೆಸ್ ಅನ್ನು ಹಿಂದಿಕ್ಕಿ 90 ವಿಧಾನಸಭಾ ಸ್ಥಾನಗಳ ಪೈಕಿ 54 ರಲ್ಲಿ ಮುನ್ನಡೆ ಸಾಧಿಸಿದ್ದು, ಹಳೆಯ ಪಕ್ಷ ಕಾಂಗ್ರೆಸ್ ಪಕ್ಷದ ಸ್ಥಾನ ಗಳಿಕೆ 34ಕ್ಕೆ ಕುಸಿದಿದೆ. ಬಿಜೆಪಿ ಮ್ಯಾಜಿಕ್ ನಂಬರ್‌ನತ್ತ ದಾಪುಗಾಲಿರಿಸಿದೆ.

ಸಿಎಂ ಮತ್ತು ಕಾಂಗ್ರೆಸ್ ಅಭ್ಯರ್ಥಿ ಭೂಪೇಶ್ ಬಘೇಲ್ 407 ಮತ ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಹೀಗೆ ಭಾಗಶಃ ಛತ್ತೀಸ್‌ಗಢ ಬಿಜೆಪಿ ತೆಕ್ಕೆಗೆ ಬಿದ್ದಂತಾಗಿದೆ. ಇನ್ನೇನು ಕೆಲ ಕ್ಷಣದಲ್ಲಿ ಅಂತಿಮ ರಿಸಲ್ಟ್ ಹೊರಬೀಳಲಿದ್ದು, ಹೀಗಿದ್ದಾಗ ದೊಡ್ಡ ಅಂತರದ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿ ಇದ್ದ ಕಾಂಗ್ರೆಸ್ ಪಕ್ಷದ ವರಿಷ್ಠರಿಗೂ ಭಾರಿ ಶಾಕ್ ಸಿಕ್ಕಂತಾಗಿದೆ. ಕಾಂಗ್ರೆಸ್‌ನ ಛತ್ತೀಸ್‌ಗಢ ನಾಯಕರು ಕೂಡ ಈಗ ಚಿಂತೆಯಲ್ಲಿ ಮುಳುಗಿದ್ದಾರೆ.

ಒಟ್ಟು 90 ಸ್ಥಾನ ಇರುವ, ಛತ್ತೀಸ್‌ಗಢ ರಾಜ್ಯದಲ್ಲಿ ಬಹುಮತ ಪಡೆಯಲು 46 ಸ್ಥಾನ ಬೇಕಿದೆ

Join Whatsapp
Exit mobile version