Home ಟಾಪ್ ಸುದ್ದಿಗಳು ಕಾಂಗ್ರೆಸ್, ಬಿಜೆಪಿ ಬಳಿಕ ಬಿಎಸ್ ಪಿ ಸೇರ್ಪಡೆಯಾದ ಇಮ್ರಾನ್ ಮಸೂದ್

ಕಾಂಗ್ರೆಸ್, ಬಿಜೆಪಿ ಬಳಿಕ ಬಿಎಸ್ ಪಿ ಸೇರ್ಪಡೆಯಾದ ಇಮ್ರಾನ್ ಮಸೂದ್

ಲಕ್ನೋ: ಪಶ್ಚಿಮ ಉತ್ತರ ಪ್ರದೇಶದ ಪ್ರಭಾವಿ ಮುಸ್ಲಿಂ ನಾಯಕ ಇಮ್ರಾನ್ ಮಸೂದ್ ಅವರು ಎಸ್ ಪಿ- ಸಮಾಜವಾದಿ ಪಕ್ಷ ಬಿಟ್ಟು ಬಿಎಸ್ ಪಿ- ಬಹುಜನ ಸಮಾಜ ಪಕ್ಷ ಸೇರಿದ್ದಾರೆ. ಈ ಹಿಂದೆ ಅವರು ಕಾಂಗ್ರೆಸ್ಸಿನಲ್ಲಿದ್ದರು.

ಈ ಹಿಂದೆ ಮುಸ್ಲಿಂ- ಯಾದವ್ ಪ್ರಯೋಗ ನಡೆದಿತ್ತು, ಈಗ ಮುಸ್ಲಿಂ – ದಲಿತ ಪ್ರಯೋಗ ಏಕೆ ನಡೆಯಬಾರದು ಎಂದು ಅವರು ಪ್ರಶ್ನಿಸಿದ್ದಾರೆ.

ನಿಜವಾಗಿ ಸಮಾಜವಾದಿ ಪಕ್ಷದಲ್ಲಿರುವ ಅಜಂ ಖಾನ್, ನಾಹಿದ್ ಹಸನ್ ಅವರು ಬಿಜೆಪಿ ಸರಕಾರದಿಂದ ಅನುಭವಿಸುತ್ತಿರುವ ಹಿಂಸೆಯಿಂದ ತಪ್ಪಿಸಿಕೊಳ್ಳಲು ಇಮ್ರಾನ್ ಸಹಿತ ಹಲವು ಮುಸ್ಲಿಂ ನಾಯಕರು ಎಸ್ ಪಿಯಿಂದ ಬಿಎಸ್ ಪಿಗೆ ಜಿಗಿದಿದ್ದಾರೆ ಎನ್ನಲಾಗಿದೆ.

ಕಳೆದ ಜನವರಿಯಲ್ಲಿ ಇಮ್ರಾನ್ ಅವರು ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷ ಸೇರಿದ್ದರು. ಕಳೆದ ಬುಧವಾರ ಬಿಎಸ್ ಪಿ ಸೇರ್ಪಡೆಯಾದರು. ಮರುದಿನವೇ ಅವರನ್ನು ಪಕ್ಷದ ಉತ್ತರ ಪ್ರದೇಶದ ಪಶ್ಚಿಮ ಭಾಗದ ಸಂಚಾಲಕರಾಗಿ ನೇಮಿಸಲಾಗಿದೆ.

ಪಶ್ಚಿಮ ಉತ್ತರ ಪ್ರದೇಶದಲ್ಲಿ ಚೌಧರಿ ಜಯಂತ್ ಸಿಂಗ್ ಅವರು ಜಾಟ್ -ಮುಸ್ಲಿಂ ಪ್ರಯೋಗವನ್ನು ಸ್ವಲ್ಪ ಮಟ್ಟಿಗೆ ಮಾಡಿದ್ದಾರೆ.  

“ಮುಸ್ಲಿಮರು ಮಾತ್ರ ಬಿಜೆಪಿಯನ್ನು ಸೋಲಿಸಲಾಗದು. ಅದಕ್ಕೆ ದಲಿತರ ಬಲ ಬೇಕು ಎಂದು ಬಿಎಸ್ ಪಿ ಸೇರಿದ್ದೇನೆ” ಎಂದು ಇಮ್ರಾನ್ ಹೇಳಿದ್ದಾರೆ.

2019ರ ವಿಧಾನ ಸಭಾ ಚುನಾವಣೆಯಲ್ಲಿ ಬಿಎಸ್ ಪಿಯು 88 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು; ಆದರೆ ಒಬ್ಬರೂ ಗೆದ್ದಿರಲಿಲ್ಲ. ಎಸ್ ಪಿ ಜೊತೆ ಲೋಕ ಸಭಾ ಚುನಾವಣೆಯಲ್ಲಿ ಮೈತ್ರಿ ಇದ್ದುದರಿಂದ ಪಡುವಣ ಉತ್ತರ ಪ್ರದೇಶದ 10ರಲ್ಲಿ 5 ಸೀಟನ್ನು ಬಿಎಸ್ ಪಿ ಗೆದ್ದಿತ್ತು. ಅದರಲ್ಲಿ ಶಹರಾನ್ ಪುರದ ಹಾಜಿ ಫಝ್ಲುಲ್ ರೆಹಮಾನ್ ಸಹ ಒಬ್ಬರು. ಇಲ್ಲಿ ಸುಮಾರು  22% ದಲಿತ ಮತದಾರರಿದ್ದು ಅವರ ಮೇಲೆ ಇಮ್ರಾನ್ ಕಣ್ಣಿಟ್ಟಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಇಮ್ರಾನ್ ಎರಡು ಲಕ್ಷ ಮತ ಪಡೆದರೂ ಗೆಲ್ಲಲಾಗದೆ ಮೂರನೇ ಸ್ಥಾನಿಯಾಗಿದ್ದರು. 2007ರಿಂದ ಇಮ್ರಾನ್ ಚುನಾವಣೆ ಗೆಲ್ಲದಿದ್ದರೂ ಅವರು ಅನುಯಾಯಿಗಳು ವಿಧಾನ ಸಭೆ ಮತ್ತು ಕಾರ್ಪೊರೇಶನ್ ಗಳಲ್ಲಿ ಗೆಲ್ಲುತ್ತಲೇ ಇದ್ದಾರೆ.

ರಾಜೀವ್ ಗಾಂಧಿ ವಲಯದ ರಶೀದ್ ಮಸೂದ್ ಅವರ ಸೋದರಳಿಯ ಈ ಇಮ್ರಾನ್ ಮಸೂದ್. ಇಮ್ರಾನ್ ಸೋಲಲು ಕಾಂಗ್ರೆಸ್ಸು ಬುಡ ಬಿದ್ದಿರುವುದೇ ಕಾರಣ ಎನ್ನುವುದು ಅವರ ಅನುಯಾಯಿಗಳ ವಾದ.

Join Whatsapp
Exit mobile version