Home ಟಾಪ್ ಸುದ್ದಿಗಳು ಕೊಪ್ಪಳದಲ್ಲಿ ಬಂಧಿಸಿದ ವಿದ್ಯಾರ್ಥಿಗಳನ್ನು ಕೂಡಲೇ ಬಿಡುಗಡೆ ಗೊಳಿಸಿ: SDPI ಆಗ್ರಹ

ಕೊಪ್ಪಳದಲ್ಲಿ ಬಂಧಿಸಿದ ವಿದ್ಯಾರ್ಥಿಗಳನ್ನು ಕೂಡಲೇ ಬಿಡುಗಡೆ ಗೊಳಿಸಿ: SDPI ಆಗ್ರಹ

ಬೆಂಗಳೂರು: ಮುಖ್ಯಮಂತ್ರಿಯವರು ರಾಜ್ಯದಲ್ಲಿ ನಡೆಸುತ್ತಿರುವ ತಾರತಮ್ಯದ ಆಡಳಿತವನ್ನು ಖಂಡಿಸಿ ಕೊಪ್ಪಳದ ವಿದ್ಯಾರ್ಥಿಗಳು, ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೊಪ್ಪಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ವಾಹನಕ್ಕೆ ಕಪ್ಪು ಬಾವುಟ ಪ್ರದರ್ಶಿಸಿದ್ದರು. ಈ ಮಧ್ಯೆ ಆ ವಿದ್ಯಾರ್ಥಿಹೋರಾಟಗಾರರನ್ನು ಕೂಡಲೇ ಸ್ಥಳೀಯ ಪೊಲೀಸರು ಬಂಧಿಸಿದ್ದು, ಇನ್ನೂ ಬಿಡುಗಡೆ ಮಾಡದಿರುವುದು ಖಂಡನೀಯ ಎಂದು SDPI ರಾಜ್ಯ ಪ್ರಧಾನ ಕಾರ್ಯದರ್ಶಿ BR ಭಾಸ್ಕರ್ ಪ್ರಸಾದ್ ಅವರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿಗೆ, ಮಂತ್ರಿಗಳಿಗೆ ಕಪ್ಪು ಬಾವುಟ ತೋರಿಸುವುದು ಮೊದಲೇನಲ್ಲ. ಹಲವು ಸಂದರ್ಭದಲ್ಲಿ ಇಂತಹ ಘಟನೆಗಳು ನಡೆದಿದೆ. ಅದನ್ನು ಮುಂದಿಟ್ಟು ಅಮಾಯಕ ವಿದ್ಯಾರ್ಥಿ ಹೋರಾಟಗಾರರನ್ನು ಬಂಧಿಸುವ ಮೂಲಕ ಪೊಲೀಸ್ ಇಲಾಖೆಯು ಸರಕಾರವನ್ನು ಮೆಚ್ಚಿಸಲು ಅಧಿಕಾರ ದುರುಪಯೋಗ ಪಡಿಸಿದೆ. ಒಂದು ವೇಳೆ ಈ ರೀತಿ ಬಂಧಿಸಿ ಜೈಲಲ್ಲಿ ಇಟ್ಟಿದ್ದರೆ ಬಿಜೆಪಿ ಮತ್ತು ವಿರೋಧ ಪಕ್ಷಗಳ ಹಲವು ನಾಯಕರು ಜೈಲಲ್ಲಿ ಇರಬೇಕಿತ್ತು. ಆದ್ದರಿಂದ ಹೋರಾಟಗಾರರನ್ನು ಹತ್ತಿಕುವ ಪ್ರಯತ್ನವನ್ನು ಸರಕಾರ ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.

ಒಂದು ವೇಳೆ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸದೇ ಹೋದರೆ ಮುಖ್ಯಮಂತ್ರಿ ಹೋದಲ್ಲೆಲ್ಲಾ SDPI ಕಾರ್ಯಕರ್ತರು ಕಪ್ಪು ಬಾವುಟ ತೋರಿಸಬೇಕಾದೀತು ಎಂದು SDPI ರಾಜ್ಯ ಪ್ರಧಾನ ಕಾರ್ಯದರ್ಶಿ BR ಭಾಸ್ಕರ್ ಪ್ರಸಾದ್ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Join Whatsapp
Exit mobile version